ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗಾಂಜಾ ಮಾರಾಟ: ಹುಬ್ಬಳ್ಳಿ ಧಾರವಾಡ ಸೇರಿ ಮತ್ತೇ 16 ಜನರ ಬಂಧನ

11:23 AM Aug 09, 2024 IST | Samyukta Karnataka

೨ ತಲವಾರ, ಒಂದು ಡ್ರಾಗ್ಯಾನ್ ವಶ:

ಹುಬ್ಬಳ್ಳಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿ, 2.50 ಲಕ್ಷ ಮೌಲ್ಯದ 2.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಧಾರವಾಡದಲ್ಲಿ ನಾಲ್ಕು ಜನರನ್ನು ಬಂಧಿಸಿ 1.942 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಡಿಸ್ಸಾ ಮೂಲದ ಕೇಶವಚಂದ್ರ, ನೀಲಾಂಬರ ರಾವುತ್, ಉತ್ತರಖಂಡದ ಮಹ್ಮದಲಿ, ಹಾವೇರಿಯ ತೌಸಿಫ್ ಅಹ್ಮದ್, ಹುಬ್ಬಳ್ಳಿಯ ಒವನ್ , ಸಿದ್ಧಾರ್ಥ ಸೇರಿ 12 ಮಂದಿ ಬಂಧಿತ ಆರೋಪಿಗಳು. 5 ಲಕ್ಷ ಮೌಲ್ಯದ ಕಾರ್, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಹಾಗೂ 2 ಸಾವಿರ ನಗದು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು.
ಪವನ್ ಮೇಲೆ‌ ನಾಲ್ಕು ಪ್ರಕರಣ ಇವೆ, ಸಿದ್ಧಾರ್ಥ ಮೇಲೆ ನಾಲ್ಕು ಪ್ರಕರಣ ಇವೆ. ತೌಸಿಫ್ ಅಹ್ಮದ್ ಮೇಲೆ ಎರಡು, ಮಂಜುನಾಥ ಮೇಲೆ ಎರಡು ಪ್ರಕರಣಗಳು ಇವೆ ಎಂದು ತಿಳಿಸಿದರು.
ಧಾರವಾಡದಲ್ಲಿ ನಾಲ್ಕು ಜನ ಗಾಂಜಾ ಕೇಸನಲ್ಲಿ‌ ಬಂಧಿಸಲಾಗಿದೆ. ೧.೯೪೨ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸಂದೀಪ, ಸೈಫಲಿ, ಸಂಕೇತ, ಹಜರತ್ ಅಲಿ ಎಂಬುವರನ್ನು ಬಂಧಿಸಲಾಗಿದೆ.
ತಬೀಬ ಲ್ಯಾಂಡ್ ಕೆಇಬಿ ಗ್ರಿಡ್ ಬಳಿ ಆರೋಪಿಗಳನ್ನು ಕರೆದೊಯ್ದು ಗಬ್ಬೂರು ಹತ್ತಿರ ಪಂಚನಾಮೆ ನಡೆಸುತ್ತಿದ್ದಾಗ, ಕೇಶವಚಂದ್ರ ಮತ್ತು ನೀಲಾಂಬರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಆ ವೇಳೆ ಸಿಸಿಬಿ ವಿಭಾಗದ ಉಮೇಶ ಮತ್ತು ಲಿಂಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಇದ್ದರು.

Tags :
#hubli
Next Article