ಗಾಯತ್ರಿ ಮಹಾಯಾಗ: ಆಹ್ವಾನ ಪತ್ರಿಕೆ ಬಿಡುಗಡೆ
11:11 AM Oct 19, 2024 IST
|
Samyukta Karnataka
ಮಧುಗಿರಿ : ರಾಜ್ಯದ ಎಲ್ಲಾ ತ್ರಿಮತಸ್ಥ ವಿಪ್ರ ಬಾಂಧವರು ಪ್ರತಿನಿತ್ಯ 108 ಬಾರಿ ಗಾಯತ್ರಿ ಜಪವನ್ನು ಅನುಷ್ಠಾನ ಮಾಡಬೇಕೆಂದು ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ವಿದು ಶೇಖರ ಭಾರತಿ ಸನ್ನಿದಾನಂಗಳವರು ತಿಳಿಸಿದರು.
ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 11ನೇ ಬ್ರಾಹ್ಮಣ ಮಹಾ ಸಮ್ಮೇಳನ ಸುವರ್ಣ ಮಹೋತ್ಸವದ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಕೋಟಿ ಗಾಯತ್ರಿ ಜಪ ಹಾಗೂ ಗಾಯತ್ರಿ ಮಹಾಯಾಗದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾಧ್ಯಕ್ಷರಾದ ಅಶೋಕ ಹಾರನಹಳ್ಳಿ, ವೇದಮೂರ್ತಿ ಭಾನುಪ್ರಕಾಶ್ ಶರ್ಮ, ವೇದಮೂರ್ತಿ ರಾಘವೇಂದ್ರ ಭಟ್, ರಾಜೇಂದ್ರ ಪ್ರಸಾದ್, ಕಾರ್ತಿಕ್ ಬಾಪಟ್, ಸುಧಾಕರ ಬಾಬು, ಮುರಳಿಧರ್, ಅರುಣ್ ಕುಮಾರ್ ಪ್ರಧಾನ ಅರ್ಚಕ ನಟರಾಜ್ ದೀಕ್ಷಿತ್ ಉಪಸ್ಥಿತರಿದ್ದರು.
Next Article