ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗುಡ್ಡ ಕುಸಿತ: ರೈಲು ಸಂಚಾರ ರದ್ದು

06:18 PM Aug 03, 2024 IST | Samyukta Karnataka

ಮಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ಮಧ್ಯೆ ಗುಡ್ಡ ಕುಸಿತ ಉಂಟಾಗಿರುವ ಕಾರಣ ಆ.೪ , ೫ ಮತ್ತು ೬ರಂದು ಹಲವು ರೈಲು ಸಂಚಾರ ರದ್ದು ಪಡಿಸಲಾಗಿದೆ
ಆ.೪ ಮತ್ತು ೫ ರಂದು ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (ರೈಲು ನಂ.೧೬೫೧೧) , ಆ.೫ಮತ್ತು ೬ ರಂದು ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ನಂ.೧೬೫೧೨) , ಆ.೪ ಮತ್ತು ೫ ರಂದು ಕೆಎಸ್‌ಆರ್ ಬೆಂಗಳೂರು-ಕಾರವಾರ ಸ್ಪೆಷಲ್ ಎಕ್ಸ್‌ಪ್ರೆಸ್ (ರೈಲು ನಂ.೧೬೫೯೫) , ಆ.೫ಮತ್ತು ೬ರಂದು ಕಾರವಾರ -ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ನಂ.೧೬೫೯೬) ಸಂಪೂರ್ಣ ರದ್ದು ಪಡಿಸಲಾಗಿದೆ.
ಆ.೪ ಮತ್ತು ೫ ರಂದು ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆ (ರೈಲು ನಂ.೧೬೫೮೫), ಆ.೫ ಮತ್ತು ೬ ರಂದು ಮುರುಡೇಶ್ವರ -ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ (ರೈಲು ನಂ.೧೬೫೮೬), ಆ.೪ ಮತ್ತು ೫ ರಂದು ವಿಜಯಪುರ- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ನಂ.೦೭೩೭೭), ಆ.೫ ಮತ್ತು ೬ ರಂದು ಮಂಗಳೂರು ಸೆಂಟ್ರಲ್ - ವಿಜಯಪುರ ಸ್ಪೆಷಲ್ ಎಕ್ಸ್ಪ್ರೆಸ್ (ರೈಲು ನಂ.೦೭೩೭೮) ಸಂಪೂರ್ಣ ರದ್ದು ಪಡಿಸಲಾಗಿದೆ.
ಆ.೫ರಂದು ಯಶವಂತಪುರ ಜಂಕ್ಷನ್-ಕಾರವಾರ ಎಕ್ಸ್‌ಪ್ರೆಸ್ (ರೈಲು ನಂ.೧೬೫೧೫) , ಆ.೬ರಂದು ಕಾರವಾರ -ಯಶವಂತಪುರ ಜಂಕ್ಷನ್ (ರೈಲು ನಂ.೧೬೫೧೬), ಆ.೪ರಂದು ಯಶವಂತಪುರ ಜಂಕ್ಷನ್ -ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ರೈಲು ನಂ.೧೬೫೭೫) , ಆ.೫ರಂದು ಮಂಗಳೂರು ಜಂಕ್ಷನ್ - ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ (ರೈಲು ನಂ.೧೬೫೭೬) ಸಂಪೂರ್ಣ ರದ್ದು ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tags :
#Hill collapse
Next Article