ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗೂಗಲ್‌ನ ಪ್ರಮುಖ ಹುದ್ದೆಗೆ ಏರಿದ ಭಾರತೀಯ

04:18 PM Oct 19, 2024 IST | Samyukta Karnataka

ಬೆಂಗಳೂರು: ಗೂಗಲ್​ ಚೀಫ್​ ಟೆಕ್ನಾಲಾಜಿಸ್ಟ್​ ಮುಖ್ಯ ತಂತ್ರಜ್ಞರಾಗಿ ಪ್ರಭಾಕರ್ ರಾಘವನ್ ನೇಮಕಗೊಂಡಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ ಈ ಕುರಿತಂತೆ ಮಾಹಿತಿ ನೀಡಿದ್ದಾರೆ, ಎನ್ನಲಾಗಿದ್ದು ರಾಘವನ್ ಅವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಎತ್ತರಕ್ಕೆ ಸಾಗುವ ಸಮಯ ಬಂದಿದೆ. 12 ವರ್ಷಗಳ ಕಾಲ ಪ್ರಮುಖ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ ಪ್ರಭಾಕರ್, ತಮ್ಮ ಕಂಪ್ಯೂಟರ್ ಸೈನ್ಸ್​ ಮೂಲಕ್ಕೆ ಹಿಂತಿರುಗಿದ್ದಾರೆ. ರಾಘವನ್ ಗೂಗಲ್​ನ ಚೀಫ್​ ಟೆಕ್ನಾಲಿಜಿಸ್ಟ್​ ಆಗಿ ಕೆಲಸ ಮಾಡಲಿದ್ದಾರೆ. ಈ ಮೂಲಕ ಅವರು ನನ್ನೊಂದಿಗೆ ನಿಕಟವಾಗಿ ಪಾಲುದಾರರಾಗುತ್ತಾರೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಕಂಪನಿಯ ಸರ್ಚ್ ಇಂಜಿನ್ ಮತ್ತು ಜಾಹೀರಾತು ಉತ್ಪನ್ನಗಳ ಉಸ್ತುವಾರಿ ಕಾರ್ಯನಿರ್ವಾಹಕ ಪ್ರಭಾಕರ್ ರಾಘವನ್ ಅವರಿಗೆ ಗೂಗಲ್​ ಹೆಚ್ಚಿನ ಜವಾಬ್ದಾರಿ ನೀಡುತ್ತಿದೆ. ಈಗ ಗೂಗಲ್ ಎಕ್ಸಿಕ್ಯೂಟಿವ್ ನಿಕ್ ಫಾಕ್ಸ್ ಅವರ ಸ್ಥಾನಕ್ಕೆ ರಾಘವನ್ ಬರಲಿದ್ದಾರೆ. ಹೌದು, ರಾಘವನ್​ ಅವರು ಈಗ ಮುಖ್ಯ ತಂತ್ರಜ್ಞರ ಪಾತ್ರವನ್ನು ವಹಿಸಲಿದ್ದಾರೆ ಎಂದಿದ್ದಾರೆ.

Tags :
#ChiefTechnologist#Google#googleceo#prabhakarraghavan
Next Article