ಗೃಹಿಣಿಯರ ಆರೋಗ್ಯಕ್ಕೆ ಎಣ್ಣೆಗಳ ಉಪಯೋಗ
11:31 AM Jul 02, 2024 IST
|
Samyukta Karnataka
ಹೆಣ್ಣುಮಕ್ಕಳಿಗೆ ಉಷ್ಣವಾಗುವುದು, ತಿಂಗಳ ಮುಟ್ಟು ಆದಾಗ ಹೊಟ್ಟೆನೋವು, ಅಜೀರ್ಣವಾಗುವುದು ಸಾಮಾನ್ಯ. ಆ ಸಮಯದಲ್ಲಿ ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆ, ತುಪ್ಪದ ಉಪಯೋಗ ಪ್ರಯೋಜನಕಾರಿಯಾಗಿದೆ.
ರಾತ್ರಿ ಮಲಗುವ ಸಮಯದಲ್ಲಿ ಎರಡು ಹನಿ ಹರಳೆಣ್ಣೆ ಹೊಕ್ಕಳಿಗೆ ಹಾಕಿ ಮಲಗಿದರೆ ಹೊಟ್ಟೆನೋವಲ್ಲದೇ, ಉಷ್ಣ ಕೂಡ ಕಡಿಮೆಯಾಗುತ್ತದೆ.
- ಮೂಳೆಗಳ ನೋವು, ಭುಜನೋವು ಕಾಲು ನೋವಿಗೆ- ಸಾಸಿವೆ ಎಣ್ಣೆ ಬಿಸಿ ಮಾಡಿ ನೋವಾದ ಸ್ಥಳಗಳಿಗೆ ಲೇಪಿಸಿ ಅರ್ಧ ಗಂಟೆಯ ನಂತರ ಬಿಸಿನೀರು ಹಾಕಿಕೊಂಡರೆ ಬಹಳ ಆರಾಮ ಎನಿಸುವದು.
- ತುಟಿಗಳು ಒಣಗಿ ಬಿರುಕು ಉಂಟಾದಾಗ ತುಪ್ಪವನ್ನು ರಾತ್ರಿ ಹಚ್ಚಿ ಮಲಗಬೇಕು. ಮೂರು ನಾಲ್ಕು ಬಾರಿ ಮಾಡಿದಾಗ ತುಟಿಗಳ ಬಿರುಕು ಕಡಿಮೆಯಾಗಿ ತಾಜಾತನ ಪಡೆಯುತ್ತವೆ.
- ಹರಳೆಣ್ಣೆ ಬೆಚ್ಚಗೆ ಮಾಡಿ ನೆತ್ತಿ, ಕೂದಲಿಗೆ ಚೆನ್ನಾಗಿ ಹಚ್ಚಿಕೊಂಡು ಮಸಾಜ್ ಮಾಡಿ ಕಣ್ಣಿಗೂ ಹಚ್ಚಿಕೊಂಡರೆ ಕೂದಲು ಉದರುವದು ಕಡಿಮೆಯಾಗುವದಲ್ಲದೇ ಕೂದಲ ಹೊಳಪು ಬೆಳವಣಿಗೆ ಚೆನ್ನಾಗಿ ಆಗುವದು. ಕಣ್ಣಿಗೆ ಹಾಯೆನಿಸುವದು. ಕಣ್ಣಿನ ಕಾಂತಿ ಹೆಚ್ಚುವದು.
- ಸಾಸಿವೆ ಎಣ್ಣೆ ಬೆಚ್ಚಗೆ ಮಾಡಿ ಕಾಲು, ಹಿಮ್ಮಡಿ, ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ ಅರ್ಧಗಂಟೆಯ ನಂತರ ಬಿಸಿನೀರಿನ ಸ್ನಾನ ಮಾಡಿದರೆ ತಾಜಾತನ ನೀಡುವದು. ಆಯಾಸ ಪರಿಹಾರವಾಗುವದು.
- ಕೊಬ್ಬರಿ ಎಣ್ಣೆಯನ್ನು ತಲೆಯ ಕೂದಲಿಗೆ, ನೆತ್ತಿಗೆ, ಕಣ್ಣಿಗೆ ಒಂದು ಬಟ್ಟಲು ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಿದರೆ ಕೂದಲ ಬೆಳವಣಿಗೆ, ಹೊಳಪು ,ಕಣ್ಣಿನ ಕಾಂತಿ ಹೆಚ್ಚಾಗುವದು.
- ಕೊಬ್ಬರಿ ಎಣ್ಣೆಗೆ ಕರಿಬೇವಿನ ಪುಡಿ ಸೇರಿಸಿ ಕೂದಲಿಗೆ, ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಿದರೆ ಬಿಳಿ ಕೂದಲು ಬರುವದು ಕಡಿಮೆಯಾಗುವದಲ್ಲದೇ ಕೂದಲು ಸೊಂಪಾಗಿ ಬೆಳೆಯಲು ಸಹಾಯವಾಗುವದು.
- ಮೆಂತ್ಯದ ಕಾಳನ್ನು ನೆನೆಹಾಕಿ ನುಣ್ಣಗೆ ರುಬ್ಬಿ ತಲೆಯ ಕೂದಲಿಗೆ ಹಚ್ಚಿ ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ತಲೆಯ ಹೊಟ್ಟು ಮಾಯವಾಗುವದು.
- ಮುಖದ ಅಂದಕ್ಕೆ ಮೊಸರು, ಕಡ್ಲೆಹಿಟ್ಟು, ಅರಿಷಿಣ ಅಥವಾ ಕಸ್ತೂರಿ ಅರಿಷಿಣದ ಲೇಪನ ಮುಖದ ಚರ್ಮ ಹೊಳಪನ್ನು ಪಡೆಯುವದು.
- ಕತ್ತು ಕಪ್ಪಗಾಗಿದ್ದರೆ ಅಕ್ಕಿಹಿಟ್ಟು, ಟೂತ್ಪೇಸ್ಟ್, ಸ್ವಲ್ಪ ಮೊಸರು ಸೇರಿಸಿ ಒಂದು ವಾರ ದಿನಬಿಟ್ಟು ದಿನ ಹಚ್ಚಿದರೆ ಕಪ್ಪು ಕಲೆ ಮಾಯವಾಗುತ್ತದೆ.
- ಕಣ್ಣಿನ ಸುತ್ತ ಆದ ಕಪ್ಪು ಮಾಯವಾಗಲು ಆಲೂಗಡ್ಡೆ ರಸ, ಸೌತೇಕಾಯಿ ರಸ ಹಚ್ಚುತ್ತಿರಬೇಕು.
- . ಗಿರಿಜಾ ಎಸ್.ದೇಶಪಾಂಡೆ, ಬೆಂಗಳೂರು
Next Article