ಗೇಟ್ ವಿನ್ಯಾಸಕ್ಕೆ ಅನುಮೋದನೆ ಸಿಕ್ಕಿದೆ: ತಂಗಡಗಿ
ಕೊಪ್ಪಳ: ಜಲಾಶಯದಲ್ಲಿ ಏನಾದರೂ ಕೆಲಸ ಮಾಡಬೇಕಾದರೂ, ಬೋರ್ಡ ಅನುಮತಿ ಪಡೆಯಬೇಕು. ಈಗಾಗಲೇ ಬೋರ್ಡ್ ಮೀಟಿಂಗ್ ಆಗಿದ್ದು, ಗೇಟ್ ವಿನ್ಯಾಸಕ್ಕೆ ಅನುಮೋದನೆ ಸಿಕ್ಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ತಾಲ್ಲೂಕಿನ ಬಸಾಪುರ ಬಳಿಯ ಗಿಣಿಗೇರಿ ಏರ್ ಫೋರ್ಟ್ ನಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇವತ್ತು ಹೆಚ್ಚಿನ ಪ್ರಮಾಣದ ನೀರನ್ನು ಹರಬಿಡಲಾಗುತ್ತಿದೆ. 1 ಲಕ್ಷ 40 ಸಾವಿರ ನೀರು ಹೊರಗಡೆ ಬಿಡಲಾಗುತ್ತಿದೆ. ಸೋಮವಾರ ತಜ್ಞರ ಜೊತೆ ಚರ್ಚೆ ಮಾಡಿದ್ದು, ಹಲವು ಸಲಹೆ ಪಡೆಯಲಾಗಿದೆ. ಇವತ್ತು ಸಿಎಂ ಬಂದು ವೀಕ್ಷಣಾ ಮಾಡಿದ ಬಳಿಕ ಗೆಟ್ ಶೆಟಪ್ ಕೆಲಸ ಶುರು ಮಾಡಲಾಗತ್ತದೆ. ಇವತ್ತು ಸಂಜೆ ಇಲ್ಲವಾದರೆ, ನಾಳೆಯಿಂದ ಗೇಟ್ ಕೂರಿಸುವ ಕೆಲಸ ಆಗತ್ತದೆ. ಎಂದರು.
ಕನ್ನಯ್ಯ ನಾಯ್ಡು ಅವರು ಇಲ್ಲಿ ಕೆಲಸ ಮಾಡಿದರು. ಇದು ನಮ್ಮ ಜಲಾಶಯ ಎಂಬ ಭಾವನೆ ಹೊಂದಿದ್ದಾರೆ. ಅವರಿಗೆ ಈ ಡ್ಯಾಂ ಬಗ್ಗೆ ಭಾವನಾತ್ಮಕ ಸಂಬಂಧ ಇದೆ ಎಂದು ಭಾವುಕರಾದರು. ಕೆಲಸ ಶುರುವಾದ ಮೇಲೆ ಯಾರನ್ನು ಡ್ಯಾಂ ಮೇಲೆ ಬಿಡಬಾರದು ಎಂದು ಸಲಹೆ ನೀಡಿದ್ದಾರೆ. ಕನ್ನಯ್ಯ ನಾಯ್ಡು ಅವರು ಸಂಜೆಯ ವರೆಗೆ ಇರುತ್ತಾರೆ. ಸಿಎಂ ಅವರ ಜೊತೆ ಚರ್ಚೆ ಮಾಡುತ್ತಾರೆ. ಒಟ್ಟು ಎರಡು ತಂತ್ರಜ್ಞರ ತಂಡಗಳು ಕೆಲಸ ಮಾಡುತ್ತಿವೆ. ಜಲಾಶಯದ ಗೇಟಿಗೆ 4 ಫೀಟು ಎತ್ತರ, 64 ಫೀಟು ಅಗಲದ ಮೊದಲ ಹಲಗೆಯನ್ನು ನೀರಿನಲ್ಲಿ ಬಿಡಲಾಗುವುದು. ಇದರಿಂದ ನೀರು ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.
17 ತಾರೀಖಿಗೆ ಮಳೆ ಹೆಚ್ಚಾಗುವ ಸಾದ್ಯತೆ ಇದೆ ಎಂದು ಮುನ್ಸೂಚನೆ ಇದೆ. 17ರ ಒಳಗಾಗಿ ಎಲ್ಲಾ ಕೆಲಸ ಮುಕ್ತಾಯ ಮಾಡುವ ಉದ್ದೇಶ ಇದೆ. ಟಿ ಬಿ ಬೋರ್ಡ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಬಿಜೆಪಿ ಅಣ್ಣಾಗಳು ಬಂದಾಗ ಕೇಳಿ ಎಂದು ತಂಗಡಗಿ ವ್ಯಂಗ್ಯವಾಡಿದರು.
ಅಧಿಕಾರಿಗಳ ಕ್ರಮದ ಬಗ್ಗೆ ನಂತರ ಯೋಚನೆ ಮಾಡುತ್ತೇವೆ. ಸದ್ಯ ನೀರು ಹಾಗೂ ಡ್ಯಾಂ ರಕ್ಷಣೆ ಮಾಡುವುದು ನಮ್ಮ ಕೆಲಸವಾಗಿದ್ದು, ನಂತರ ತನಿಖೆ ಮತ್ತು ಕ್ರಮದ ಬಗ್ಗೆ ಹೇಳುತ್ತೇವೆ ಎಂದರು.