ಗೋವಿನ ಕೆಚ್ಚಲು ಕತ್ತರಿಸಿದಾತ ವಿಚಿತ್ರ ಮನಸ್ಸಿನ ವಿಕ್ಷಿಪ್ತ ವ್ಯಕ್ತಿ
ಬೆಂಗಳೂರು: ಚಾಮರಾಜಪೇಟೆ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ದುರುಳನ ಬಗ್ಗೆ ಒಂದೊಂದೇ ಮಾಹಿತಿ ಲಭ್ಯವಾಗುತ್ತಿದ್ದು, ಆತ ವಿಚಿತ್ರ ಮನಸ್ಸಿನ ವ್ಯಕ್ತಿಯಾಗಿದ್ದನಂತೆ. ಒಳ ಉಡುಪು ಧರಿಸುತ್ತಿರಲಿಲ್ಲ ಎಂಬುದು ಗೊತ್ತಾಗಿದೆ.
ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಮಲಗುತ್ತಿದ್ದನಂತೆ. ಊಟ ತಂದು ಅಲ್ಲಿಯೇ ತಿನ್ನುತ್ತಿದ್ದನಂತೆ. ಇನ್ನು ಆತನಿಗೆ ತಾನು ಯಾವ ಊರಿನಲ್ಲಿ ಇದ್ದೇನೆ ಎಂಬುದೇ ಗೊತ್ತಿಲ್ಲವಂತೆ. ಆತನಿಗೆ ಹಿಂದಿ ಭಾಷೆಯೂ ಬರುವುದಿಲ್ಲವಂತೆ. ಕೇವಲ ಲುಂಗಿ ಹಾಗೂ ಶರ್ಟ್ ಧರಿಸುತ್ತಿದ್ದನಂತೆ. ಒಳ ಉಡುಪು ಹಾಕಿಕೊಳ್ಳುತ್ತಿರಲಿಲ್ಲವಂತೆ.
ತಲೆ ಕೂದಲು ಹೆಚ್ಚಾಗಿ ಬೆಳೆದರೆ ಸಲೂನ್‌ಗೆ ಹೋಗುತ್ತಿರಲಿಲ್ಲವಂತೆ. ತಾನೇ ಬೋಳಿಸಿಕೊಳ್ಳುತ್ತಿದ್ದನಂತೆ. ಅತಿ ಹೆಚ್ಚಾಗಿ ನೀಲಿ ಚಿತ್ರಗಳನ್ನೇ ವೀಕ್ಷಿಸುತ್ತಿದ್ದ ಎಂದು ಗೊತ್ತಾಗಿದೆ. ಇದು ಮಾತ್ರವಲ್ಲದೆ ಈ ಹಿಂದೆಯೂ ಹಸುಗಳನ್ನು ಕಂಡರೆ ಅವುಗಳ ಜೊತೆ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂಬುದು ಪೊಲೀಸರು ಪ್ರಾಥಮಿಕ ತನಿಖೆ ಮಾಡಿದ ಸಂದರ್ಭದಲ್ಲಿ ಈ ಮಾಹಿತಿಯೂ ಲಭ್ಯವಾಗಿದೆ.
ಕಳೆದ ಶನಿವಾರ ರಾತ್ರಿ ಕೀಚಕ ಸೈಯ್ಯದ್ ನಸ್ರು ಬೀದಿ ಬದಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ್ದನಲ್ಲದೆ, ಕಾಲುಗಳಿಗೂ ಗಾಯಗೊಳಿಸಿದ್ದ. ಭಾನುವಾರ ಬೆಳಗ್ಗೆ ವಿಷಯ ಬೆಳಕಿಗೆ ಬಂದಿತ್ತು. ಈ ವಿಷಯ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೇ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಯಿತು. ಹಿಂದೂಪರ ಸಂಘಟನೆಗಳು ಕೃತ್ಯವನ್ನು ಖಂಡಿಸಿದರಲ್ಲದೆ, ದುರುಳರನ್ನು ಬಂಧಿಸಬೇಕು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು. ರಾಜ್ಯದ ಪ್ರತಿಪಕ್ಷಗಳು ಕೂಡಾ ಘಟನೆಯನ್ನು ಖಂಡಿಸಿದರಲ್ಲದೆ, ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
ತನಿಖೆ ಮಾಡಿ ಕ್ರಮ-ಪರಂ
ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದಿರುವ ವ್ಯಕ್ತಿಯ ಹಿಂದೆ ಯಾರೇ ಇದ್ದರೂ ಸರ್ಕಾರ ಸುಮ್ಮನಿರುವುದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾನವೀಯತೆ ಇರುವವರು ಯಾರು ಕೂಡ ಇಂತಹ ನೀತಿ ಕೃತ್ಯ ಮಾಡಲ್ಲ. ಆತ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ. ಪ್ರಕರಣದ ಹಿಂದೆ ಮತ್ತೆ ಯಾರೋ ಇದ್ದರೆ ಆತ ಬಾಯಿ ಬಿಡುತ್ತಾನೆ. ಆಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಸದ್ಯ ಪ್ರಕರಣದ ಆರೋಪಿಯ ಬಗ್ಗೆ ಸಾಕ್ಷಿ ಸಿಕ್ಕಿದ್ದಕ್ಕೆ ಬಂಧಿಸಲಾಗಿದೆ. ಪ್ರಕರಣದಲ್ಲಿ ಎಷ್ಟೇ ದೊಡ್ಡವರಿರಲ್ಲಿ ಚಿಕ್ಕವರಿರಲಿ ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರಿಗೆ ಕ್ಷಮೆ ಇರಲ್ಲ. ಘಟನೆಯಲ್ಲಿ ಇನ್ಯಾರೋರು ಇದ್ದರೂ ಕೂಡ ಆರೋಪಿ ಬಾಯಿ ಬಿಡುತ್ತಾನೆ. ಅವರ ವಿರುದ್ಧವು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಅವನು ಬಿಹಾರದಿಂದ ಬಂದಿದ್ದಾನೆ. ಕುಡಿದ ಮತ್ತಿನಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದಾನೆ ಎನ್ನಲಾಗಿದೆ.