ಗೋಶಾಲೆ ತೆರವುಗೊಳಿಸಿದ ಪಾಲಿಕೆ
01:36 PM Jan 21, 2025 IST
|
Samyukta Karnataka
ಗೋಶಾಲೆಯಲ್ಲಿದ್ದ ಸುಮಾರು 60 ಗೋವುಗಳನ್ನು ನಗರದ ಮಲಿಯಾಬಾದ್ ಗೋಶಾಲೆಗೆ
ರಾಯಚೂರು: ಮೃತ್ಯುಂಜಯ ಮಠ ಹಾಗೂ ಗೋಶಾಲೆಯನ್ನು ಅಧಿಕಾರಿಗಳು ಬೆಳ್ಳಂಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ತೆರವು ಮಾಡಿದ್ದಾರೆ.
ತಾಲೂಕಿನ ಏಗನೂರು ಗ್ರಾಮದ ಬಳಿಯ ಸುಮಾರು 4 ಎಕರೆ ಸರ್ಕಾರಿ ಜಾಗದಲ್ಲಿ ಮಠ, ಗೋಶಾಲೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮಸ್ಥರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆಗೆ ನಡೆಸಿದ್ದಾರೆ, ರಾಜೀವ್ ಗಾಂಧಿ ವಸತಿ ಯೋಜನೆಗೆ ಮಂಜೂರಾದ ಜಾಗದಲ್ಲಿರುವ ಮಠ ತೆರವಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ವಿರೋಧದ ನಡುವೆಯೂ ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರೆಸಿದ್ದು, ಗೋಶಾಲೆಯಲ್ಲಿದ್ದ ಸುಮಾರು 60 ಗೋವುಗಳನ್ನು ನಗರದ ಮಲಿಯಾಬಾದ್ ಗೋಶಾಲೆಗೆ ಸಾಗಿಸಸಿದ್ದಾರೆ.
ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಏಗನೂರು ಗ್ರಾಮದ ಸರ್ವೆ ನಂಬರ್ 202ರಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮೃತ್ಯುಂಜಯ ಸ್ವಾಮಿ ಎನ್ನುವವರು ಗೋಶಾಲೆ ನಿರ್ಮಿಸಿದ್ದಾರು ಎಂಬ ಆರೋಪ.
Next Article