ಗೌಡರ ಕೋಟಾದಲ್ಲಿ ಸಿಎಂ ಮಾಡುತ್ತಾರೆ ಅಂತ ಹಗಲು ಕನಸು ಕಾಣುತ್ತಿದ್ದಿರಾ...
ಯಾದಗಿರಿ: ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಗೌಡರ ಕೋಟಾದಲ್ಲಿ ಸಿಎಂ ಮಾಡುತ್ತಾರೆ ಅಂತ ಹಗಲು ಕನಸು ಕಾಣುತ್ತಿದ್ದಿರಾ ಎಂದು ಕೃಷ್ಣ ಭೈರೆಗೌಡ ಅವರಿಗೆ ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.
ಶಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೃಷ್ಣ ಭೈರೆಗೌಡ ಅವರೇ ಬಹಳ ವೀರಾವೇಶದಿಂದ ಮಾತಾನಾಡ್ತಿರಿ, ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಿದ್ರೆ ಗೌಡರ ಕೋಟಾದಲ್ಲಿ ಸಿಎಂ ಮಾಡ್ತಾರೆ ಅಂತ ಹಗಲು ಕನಸು ಕಾಣ್ತಾಯಿದ್ದಿರಾ, ಹಿಂದೆ ಕೃಷಿ ಸಚಿವರಾಗಿದ್ರಿ ಅಲ್ಲೂ ಏನು ಮಾಡಿಲ್ಲ. ಗಿಡದ ಮೇಲೆ ಕುಳಿತ ಕಾಗೆ ತರಹ ಕಾ ಕಾ ಅನ್ನುವದನ್ನು ಬಿಡಿ ಕೆಲಸ ಮಾಡಿ, ಈಗ ಕಂದಾಯ ಖಾತೆ ಕೊಟ್ಟಿದ್ದಾರೆ ಜನ ನರಳುತ್ತಿದ್ದಾರೆ ಇಲಾಖೆಯ ಕೊಟ್ಟು ಕೆಲಸವನ್ನ ಮೊದಲು ಸರಿಯಾಗಿ ಮಾಡಿ, ಆಮೇಲೆ ರಾಜಕೀಯ ಹೇಳಿಕೆ ಕೊಡೋಕೆ ಬೇರೆ ವೇದಿಕೆಯಿದೆ, ನಿಮಗೆ 135 ಸೀಟು ಕೊಟ್ಟು ಅಧಿಕಾರ ಕೊಟ್ಟಿದ್ದಾರೆ ಆದರೆ ರಾಜ್ಯದಲ್ಲಿ ರಸ್ತೆ ಹದಗೆಟ್ಟು ಹೋಗಿದೆ ಅದು ಮಾಡಿ, ದಯವಿಟ್ಟು ಕೆಲಸ ಮಾಡಿ ಇನ್ನು ಮೂರುವರೆ ವರ್ಷ ನಿಮ್ದೆ ಸರ್ಕಾರ, ನಿಮ್ಮ ಸರ್ಕಾರವನ್ನ ಯಾರು ಬಿಳಿಸೋಲ್ಲ, ನೀವು ನೀವು ಹೊಡಿದ್ದಾಡಿಕೊಂಡು ಬಿಳಬೇಕು ಹೊರತು ಯಾರು ಸರ್ಕಾರ ಬಿಳಿಸೋಲ್ಲ ಎಂದರು.
ಸನಾತನ ಧರ್ಮ ಮಂಡಳಿ ಸ್ಥಾಪನೆ: ಚರ್ಚೆ ಮಸೀದಿಗಳನ್ನು ಭವ್ಯವಾಗಿ ನಿರ್ಮಾಣ ಮಾಡ್ತಾರೆ. ಅವುಗಳಿಗೆ ಯಾರ ಕಂಟ್ರೋಲ್ ಇಲ್ಲಾ, ಇಂತಹ ಒಂದು ಬೋರ್ಡ ರಚನೆ ಮಾಡುವ ಅವಶ್ಯಕತೆ ಇದೆ. ವಕ್ಫ್ ಬೋರ್ಡ ತಿದ್ದುಪಡಿ ಅಲ್ಲಾ ಆಕ್ಟ್ ಬರಕಾಸ್ ಮಾಡಬೇಕು , ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸಬೇಕು.
ತಿರುಪತಿ ಲಡ್ಡು : ತಿರುಪತಿಗೆ ನಾವು ಸೆವೆನ್ ಹಿಲ್ಸ್, ಎಡಕೊಂಡ್ಲಾ ಅಂತ ಹೇಳ್ತಿವಿ, ತಿರುಪತಿ ಬೆಟ್ಟದಲ್ಲಿ ಹಿಂದೆ ಕೂಡ ವೈ.ಎಸ್.ರಾಜಶೇಖರರೆಡ್ಡಿ ಸಿಎಂ ಆಗಿದ್ದಾಗ ಕನ್ವರ್ಷನ್ ಆರಂಭ ಮಾಡಿದ್ರು, ಅವರಪ್ಪ ದುರ್ಘಟನೆಯಲ್ಲಿ ತಿರಿಕೊಂಡ್ರು, ಅದಾದ ಬಳಿಕ ಚಂದ್ರಬಾಬ ನಾಯ್ಡು ಅವರ ಸರ್ಕಾರ ಬಂತು, ಅದಾದ ನಂತರ ರಾಜಶೇಖರ ರೆಡ್ಡಿಯವರ ಮಗ ಜಗನ್ ಮೋಹನ ರೆಡ್ಡಿ ಬಂದ್ರು, ಜಗನ್ ಮೋಹನರೆಡ್ಡಿ ಬಂದ್ಮೇಲೆ ಟಿಟಿಡಿನಲ್ಲಿ ಕ್ರಿಶ್ಚಿಯನರನ್ನ ತಂದು ಹಾಕುವ ಕೆಲಸ ಆಯ್ತು, ಯಾರಾದರೂ ಭಕ್ತರು ಚೆಕ್ ಮುಖಾಂತರ ಹುಂಡಿಗೆ ಹಣ ಕೊಡಲಿಕ್ಕೆ ಬಂದ್ರೆ ಒಂದು ಪ್ರಾಜೆಕ್ಟ್ ಇದೆ, ಇಲ್ಲಿ ಕ್ರಿಶ್ಚಿಯನ್ ಹಾಸ್ಟೆಲ್ ಕಟ್ಟೋಕೆ ದುಡ್ಡು ಕೊಡಿ ಡೈವರ್ಟ್ ಮಾಡಿದ್ರು, ಜಗನ್ ಮೋಹನ್ ರೆಡ್ಡಿ ಹೆಸರು ಮುಂದೆ ಮಾತ್ರ ರೆಡ್ಡಿ ಇದೆ ಆದ್ರೆ ಅವರಪ್ಪ ಕ್ರಿಶ್ಚಿಯನ್, ರೆಡ್ಡಿ ಅನ್ನೋ ಹೆಸರಿಟ್ಕೊಂಡು ಹಿಂದುಗಳಿಗೂ ಮೋಸ ಮಾಡ್ತಿದ್ದಾನೆ, ಆತನ ಮೂಲ ಧರ್ಮವಾದ ಕ್ರಿಶ್ಚಿಯನ್, ಅಚ್ಚಲವಾದ ನಂಬಿಕೆಯನ್ನು ಕನ್ವರ್ಷನ್ ಮೂಲಕ ಕೆಲಸ ಮಾಡ್ತಿದ್ದಾನೆ, ಇಡೀ ಆಂದ್ರಪ್ರದೇಶದಲ್ಲಿ ಹಳ್ಳಿ ಹಳ್ಳಿಗೂ ಎರಡೆರಡೂ ಚರ್ಚ್ ಬಂದಿವೆ, ತಿರುಪತಿ ತಿಮ್ಮಪ್ಪನ ಲಡ್ಡು ಮನೆಗೆ ಬಂದರೆ ಅದರ ಪರಿಮಳನೇ ಬೇರೆ, ಆ ಒಂದು ಲಡ್ಡುನ ಅಪವಿತ್ರ ಮಾಡುವಂತ ಕೆಲಸ ಮಾಡಿದ್ದಾನೆ, ಅದರಲ್ಲಿ ದನದ ಕೊಬ್ಬು, ಹಂದಿಕೊಬ್ಬು, ಮೀನಿನ ಎಣ್ಣೆ ಹಾಕಿದ್ದಾರೆ, ಇದನ್ನೆಲ್ಲ ಹಾಕಿ ಹಿಂದುಗಳ ಧಾರ್ಮಿಕ ಭಾವನೆ ಹೊಡೆಯವ ಕೆಲಸ ಜಗನ್ ಮೋಹನ್ ರೆಡ್ಡಿ ಮಾಡಿದ್ದಾರೆ, ಇದನ್ನು ಚಂದ್ರಬಾಬು ನಾಯ್ಡು ಅವರೇ ಸ್ವತಃ ಹೇಳಿದ್ದಾರೆ, ಟಿಟಿಡಿ ಟ್ರಸ್ಟ್ ಅನ್ನು ರಿ ಕಾನ್ಸಟಂಟ್ ಮಾಡಿ ಕ್ರಿಶ್ಚಿಯನ್ನರನ್ನು ತಂದು ಕೂರಿಸಿದ್ದು, ಯಾರ್ಯಾರಿಗೋ ಕಾಂಟ್ರಾಕ್ಟ್ ಕೊಟ್ಟಿದ್ದು, ಇದರ ಹಿಂದೆ ಜಗನ್ ಮೋಹನ್ ರೆಡ್ಡಿ ಅವರ ಕೈವಾಡ ಇದೆ, ಇದನ್ನ ಪತ್ತೆ ಹಚ್ಚಿ ಆತನನ್ನ ಶಿಕ್ಷೆಗೆ ಗುರಿಪಡಿಸಬೇಕು, ಇನ್ಮುಂದೆ ಕ್ರಿಶ್ಚಿಯನ್ ಮತಿಯ ಭಾವನೆ ಇರುವಂತವರಿಗೆ ಆಂದ್ರಪ್ರದೇಶದಲ್ಲಿ ತಲೆ ಎತ್ತೋಕೆ ಬಿಡಬಾರದು, ಹಿಂದು ಸಮಾಜ ಮತೀಯ ಭಾವನೆ ಹೊಂದಿರುವಂತ ಕ್ರಿಶ್ಚಿಯನ್, ಮುಸಲ್ಮಾನರ ಬಗ್ಗೆ ಅರಿವಿಟ್ಟುಕೊಂಡು ಜಾಗೃತಿ ಮೂಡಿಸಬೇಕು, ಹಿಂದುಗಳು ಎಚ್ಚೆತ್ತು ಜಾಗೃತಿ ಮೂಡಿಸಲಿಲ್ಲ ಅಂದ್ರೆ ಈ ದೇಶ ಕಳೆದುಕೊಳ್ಳಬೇಕಾಗುತ್ತೆ.