ಗ್ಯಾರಂಟಿ ಯೋಜನೆಗಳ ಅನುಷ್ಠಾನ : ಶ್ವೇತಪತ್ರ ಹೊರಡಿಸಲು ಸರ್ಕಾರಕ್ಕೆ ಒತ್ತಾಯ
ಸಂ.ಕ.ಸಮಾಚಾರ ಬೀದರ್ : ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಶ್ವೇತಪತ್ರ ಹೊರಡಿಸುವಂತೆ ಆಮ್ ಆದ್ಮಿ ಪಕ್ಷದ (ಆಪ್) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಲ್ಲಿ ಸೋಮವಾರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಗ್ಯಾರಂಟಿ ಯೋಜನೆಗಳು ದೆಹಲಿಯಲ್ಲಿನ ಕೆಜ್ರಿವಾಲ್ ಸರ್ಕಾರದ ನಕಲು ಪ್ರತಿಯಾಗಿವೆ ಎಂದು ಪ್ರತಿಪಾದಿಸಿದರು. ಸಿದ್ರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮುಗ್ಗರಿಸಿದೆ. ಗ್ಯಾರಂಟಿ ಯೋಜನೆಗಳ ಅರ್ಹ ಅನೇಕ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಎಂದು ಸಿಡಿಮಿಡಿ ದನಿಯಲ್ಲಿ ನುಡಿದರು.
`ಕಾರಂಜಾ ಯೋಜನೆ'
ಬೀದರ್ ಜಿಲ್ಲೆಗೆ ಸಂಬAಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದ ಅವರು, ಕಾರಂಜಾ ಆಣೆಕಟ್ಟು ಕಾಲುವೆಗಳಲ್ಲಿ ಹಣ ಹರಿದಿದೆ. ೯೦ ಕೋಟಿ ರೂ/ಗಳ ವೆಚ್ಚದಲ್ಲಿ ಆರಂಭವಾದ ಯೋಜನೆಯಲ್ಲಿ ಅನೇಕ ಗುತ್ತಿಗೆದಾರರು ಮತ್ತು ಮತ್ತಿತರರು ಮುಳುಗೆದ್ದರು ಎಂದು ನುಡಿದರು. ಬಂದಾಗಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಯಾರೂ ಗತಿ ಇಲ್ಲದಂತಾಗಿದೆ ಎಂದು ಟೀಕಿಸಿದರು. ನಸೀಮೋದ್ದೀನ್ ಎನ್ ಪಟೇಲ್, ವೆಂಕಟೇಶ ಮತ್ತು ಬ್ಯಾಂಕ್ ರೆಡ್ಡಿ ಉಪಸ್ಥಿತರಿದ್ದರು.