For the best experience, open
https://m.samyuktakarnataka.in
on your mobile browser.

ಘಟಿಕೋತ್ಸವದಲ್ಲಿ ನೂತನ ಶಾಸಕ ಪಠಾಣ ದರ್ಪ..

12:40 PM Dec 02, 2024 IST | Samyukta Karnataka
ಘಟಿಕೋತ್ಸವದಲ್ಲಿ ನೂತನ ಶಾಸಕ ಪಠಾಣ ದರ್ಪ

ಹಾವೇರಿ: ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇದಿಕೆಗೆ ನನ್ನನ್ನು ಆಹ್ವಾನಿಸಿಲ್ಲ, ನಾನೂ ಬಂದರೂ ಯಾರೂ ಸ್ವಾಗತಿಸಲಿಲ್ಲ ಎಂದು ಕ್ಯಾತೆ ತೆಗೆದ ನೂತನ ಶಾಸಕ ಯಾಸೀರ್ ಖಾನ್ ಪಠಾಣ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ಘಟನೆ ಸೋಮವಾರ ನಡೆಯಿತು.

ಜಾನಪದ ವಿವಿ ಆವರಣದಲ್ಲಿ ಜಾನಪದ ಶೈಲಿಯಲ್ಲಿ ಮೆರವಣಿಗೆ ಆರಂಭವಾಯಿತು. ಮೆರವಣಿಕೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಅವರು ಪಾಲ್ಲೊಂಡಿದ್ದರು. ಮೆರವಣಿಗೆ ವೇದಿಕೆಯತ್ತ ಸಾಗುತ್ತಿದ್ದಾಗ ಸ್ಥಳಕ್ಕೆ ಶಾಸಕ ಯಾಸೀರ್ ಖಾನ್ ಪಠಾಣ ಆಗಮಿಸಿದರು. ಮುಂದೆ ಹೋಗಿ ಸಚಿವರನ್ನು ಭೇಟಿಯಾಗಿ ಬಳಿಕ ಹಿಂದೆ ಬಂದ ಶಾಸಕರು ಬೆಂಬಲಿಗರೊಂದಿಗೆ ಗುಂಪು ಸೇರಿ ಘಟಿಕೋತ್ಸವದ ವೇದಿಕೆ ಮುಂದೆ ಆಗಮಿಸಿ, ನನ್ನನ್ನು ವೇದಿಕೆ ಕರೆದಿಲ್ಲಾ, ನಾನು ಕಾಲೇಜ್ ಬಂದರೂ ಯಾರೂ‌ ಸ್ವಾಗತಿಸಲಿಲ್ಲ, 'ನಿಮಗೆ ಮುಂದೆ ಐತಿ, ಯುನಿವರ್ಸಿಟಿಯವರು ಇಲ್ಲಿ ಬಾಳ್ವೆ ಮಾಡಿ ನೋಡ್ತಿನಿ' ಎಂದು ಆವಾಜ್ ಹಾಕಿದರು. ಅಲ್ಲದೇ ನಮ್ಮ ಶಾಸಕರ ಹೆಸರನ್ನು ಕಾರ್ಡ್ ನಲ್ಲಿ ಹಾಕಿಲ್ಲ ಎಂದು ವಿವಿ ವಿರುದ್ಧ ಧಿಕ್ಕಾರ ಕೂಗಿದರು. ಆಗ ವಿವಿಯ ಸಿಬ್ಬಂದಿಯನ್ನು ಎಳದಾಡಿದ ಶಾಸಕ ಬೆಂಬಲಿಗರು ದರ್ಪ ತೋರಿದರು. ಇದನೆಲ್ಲಾ ನೋಡುತ್ತಿದ್ದ ವಿದ್ಯಾರ್ಥಿಗಳು, ಸಭೀಕರು ಏನಿದು ಶಾಸಕರಿಗೆ ಘಟಿಕೋತ್ಸವದ ಶಿಷ್ಟಾಚಾರವೇ ಗೊತ್ತಿಲ್ಲ ಎಂದು ನಸು ನಕ್ಕರೆ.