For the best experience, open
https://m.samyuktakarnataka.in
on your mobile browser.

ಚಂದ್ರಯಾನ ತಂಡ ಸೇರಿ 32 ವಿಜ್ಞಾನಿಗಳಿಗೆ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ

07:38 PM Aug 07, 2024 IST | Samyukta Karnataka
ಚಂದ್ರಯಾನ ತಂಡ ಸೇರಿ 32 ವಿಜ್ಞಾನಿಗಳಿಗೆ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ

ನವದೆಹಲಿ: ವಿಜ್ಞಾನ ರತ್ನ ಪುರಸ್ಕಾರ ಪ್ರಶಸ್ತಿಯ ವಿಜೇತರಾಗಿ ಜೈವಿಕ ರಸಾಯನ ವಿಜ್ಞಾನಿ ಗೋವಿಂದರಾಜನ್ ಪದ್ಮನಾಭನ್ ಅವರು ಆಯ್ಕೆಯಾಗಿದ್ದಾರೆ.
ಚಂದ್ರಯಾನ-3ರ ತಂಡ ಸೇರಿದಂತೆ 32 ವಿಜ್ಞಾನಿಗಳಿಗೆ 2024 ರ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಲಭಿಸಿದೆ. ಕೇಂದ್ರ ಸರ್ಕಾರವು ಆರಂಭಿಸಿರುವ ವಿಜ್ಞಾನ ಪುರಸ್ಕಾರವನ್ನು ಇಂದು ಪ್ರಕಟಿಸಿದ್ದು

ಇದರಲ್ಲಿ 18 ಯುವ ವಿಜ್ಞಾನಿಗಳಿಗೆ ವಿಜ್ಞಾನ ಯುವ ಪುರಸ್ಕಾರ ಪ್ರಶಸ್ತಿ ಹಾಗೂ 13 ಸಾಧಕರಿಗೆ ವಿಜ್ಞಾನ ಶ್ರೀ ಪುರಸ್ಕಾರ ಲಭಿಸಿದೆ ಅಲ್ಲದೆ ಚಂದ್ರಯಾನ-3ರ ತಂಡಕ್ಕೆ ವಿಜ್ಞಾನ ತಂಡ ಪ್ರಶಸ್ತಿ ಲಭಿಸಿದೆ. ಕೇಂದ್ರ ಸರ್ಕಾರ 2024ರ ಆರಂಭದಲ್ಲಿ ಸ್ಥಾಪಿಸಿದ್ದ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆ ಹಾಗೂ ವಿನೂತನ ಆವಿಷ್ಕಾರಗಳಿಗಾಗಿ ರಾಷ್ಟ್ರೀಯ ವಿಜ್ಞಾನ ಪುರಸ್ಕಾರವನ್ನು ನೀಡಿದೆ. ಅದರಂತೆ ವಿಜ್ಞಾನ ಶ್ರೀ ಪ್ರಶಸ್ತಿಯನ್ನು ಖಗೋಳಭೌತ ವಿಜ್ಞಾನಿ ಅನ್ನಪೂರಿಣಿ ಸುಬ್ರಮಣಿಯನ್, ಕೃಷಿ ವಿಜ್ಞಾನಿ ಸಿ. ಅನಂತರಾಮಕೃಷ್ಣನ್, ಅಣು ಶಕ್ತಿ ವಿಜ್ಞಾನಿ ಅವೇಶ್ ಕುಮಾರ್ ತ್ಯಾಗಿ, ಜೀವವಿಜ್ಞಾನಿಗಳಾದ ಪ್ರೊ. ಉಮೇಶ್ ವರ್ಷಣಿ ಹಾಗೂ ಪ್ರೊ. ಜಯಂತ ಬಾಲಚಂದ್ರ ಉದ್ಗಾಂವಕರ್, ಭೂವಿಜ್ಞಾನಿ ಪ್ರೊ. ಸೈಯದ್‌ ವಾಜಿ, ಎಂಜಿನಿಯರಿಂಗ್ ವಿಜ್ಞಾನದ ಪ್ರೊ. ಭೀಮ್ ಸಿಂಗ್, ಗಣಿತ ಹಾಗೂ ಗಣಕ ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಪ್ರೊ. ಆದಿಮೂರುತಿ ಆದಿ ಹಾಗೂ ಪ್ರೊ. ರಾಹುಲ್ ಮುಖರ್ಜಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರೊ. ಡಾ. ಸಂಜಯ್‌ ಬೆಹಾರಿ, ಭೌತವಿಜ್ಞಾನದಲ್ಲಿ ಪ್ರೊ. ಲಕ್ಷ್ಮಣ ಮುತ್ತುಸ್ವಾಮಿ ಹಾಗೂ ಪ್ರೊ. ನಬಾ ಕುಮಾರ್ ಮಂಡಲ್ ಹಾಗೂ ತಂತ್ರಜ್ಞಾನ ಮತ್ತು ಆವಿಷ್ಕಾರ ವಿಭಾಗದಲ್ಲಿ ರೋಹಿತ್‌ ಶ್ರೀವಾಸ್ತವ ಅವರಿಗೆ ಪ್ರಶಸ್ತಿ ಲಭಿಸಿದ್ದು, ವಿಜ್ಞಾನ ಯುವ ಪ್ರಶಸ್ತಿಯಲ್ಲಿ ಎಸ್.ಎಲ್. ಕೃಷ್ಣಮೂರ್ತಿ, ಕೃಷಿ ವಿಜ್ಞಾನಿ ಸ್ವರೂಪ್ ಕುಮಾರ್ ಪರಿದಾ, ಜೈವಿಕ ವಿಜ್ಞಾನದಲ್ಲಿ ರಾಧಾಕೃಷ್ಣನ್‌ ಮಹಾಲಕ್ಷ್ಮಿ ಹಾಗೂ ಪ್ರೊ. ಅರವಿಂದ ಪೆನ್ಮಾ, ರಸಾಯನವಿಜ್ಞಾನ ವಿಷಯದಲ್ಲಿ ವಿವೇಕ್ ಪಾಲ್‌ಶೆಟ್ಟಿವಾ‌ ಹಾಗೂ ವಿಶಾಲ್ ರೈ, ಭೂ ವಿಜ್ಞಾನದಲ್ಲಿ ರಾಕ್ಸಿ ಮಾದ್ರೂ ಕೋಲ್, ಎಂಜಿನಿಯರಿಂಗ್ ವಿಜ್ಞಾನದಲ್ಲಿ ಅಭಿಲಾಶ್ ಹಾಗೂ ರಾಧಾ ಕೃಷ್ಣನ್ ಗಂಟಿ, ಪರಿಸರ ವಿಜ್ಞಾನ ವಿಷಯದಲ್ಲಿ ಪೂರಬಿ ಸೈಕೈ ಹಾಗೂ ಬಪ್ಪಿ ಪೌಲ್, ಗಣಿತ ಹಾಗೂ ಗಣಕ ವಿಜ್ಞಾನದಲ್ಲಿ ಮಹೇಶ್ ರಮೇಶ್ ಕಾಕಡೆ, ವೈದ್ಯಕೀಯ ಕ್ಷೇತ್ರದಲ್ಲಿ ಜಿತೇಂದ್ರ ಕುಮಾರ್ ಸಾಹು ಹಾಗೂ ಪ್ರಗ್ಯಾ ಧೃವ್ ಯಾದವ್, ಭೌತವಿಜ್ಞಾನದಲ್ಲಿ ಊರ್ವಸಿ ಸಿನ್ಹಾ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ದಿಂಗೇಂದರನಾಥ ಸೈನ್ ಹಾಗೂ ಪ್ರಶಾಂತ್ ಕುಮಾರ್‌, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಭು ರಾಜಗೋಪಾಲ್ ಅವರಿಗೆ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ರಾಷ್ಟ್ರೀಯ ವಿಜ್ಞಾನ ದಿನವಾದ ಅ. 23ರಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.