For the best experience, open
https://m.samyuktakarnataka.in
on your mobile browser.

ಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು

01:45 PM Nov 23, 2024 IST | Samyukta Karnataka
ಚನ್ನಪಟ್ಟಣ  ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಗೆಲುವು

ರಾಮನಗರ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಜಯಬೇರಿ ಭಾರಿಸಿದ್ದಾರೆ.
ರಾಮನಗರದ ಅರ್ಚಕರ ಹಳ್ಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ.23ರ ಶನಿವಾರ ಬೆಳಿಗ್ಗೆ 8 ರಿಂದ ಮತ ಎಣಿಕೆ ಆರಂಭಗೊಂಡಿತು. ಒಟ್ಟು 20 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಅಂಚೆ ಮತಗಳನ್ನು ಹೊರತು ಪಡಿಸಿ, 25,357 ಮತಗಳ ಅಂತರದಿಂದ ಸಿ.ಪಿ. ಯೋಗೇಶ್ವರ್ ಅವರು ಗೆಲುವು ದಾಖಲಿಸಿದ್ದಾರೆ. ಇದೇ ಮೊದಲ ಭಾರಿಗೆ (1999 ರಿಂದ ಈ ವರೆಗೂ ) ಒಂದು ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದಾರೆ. ಈವರೆಗೂ 9 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಸಿ.ಪಿ. ಯೋಗೇಶ್ವರ್ ಅವರಿಗೆ ಇದು ಆರನೇ ಗೆಲುವು. ಚನ್ನಪಟ್ಟಣದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಗಳಲ್ಲಿ 2009 ರಲ್ಲಿ ಸೋಲು ಕಂಡಿದ್ದ ಅವರು 2011 ರಲ್ಲಿ ಗೆಲುವು ದಾಖಲಿಸಿದ್ದರು. 20 ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 1,12,388 ಮತ ಪಡಿದಿದ್ದಾರೆ. ಎನ್‌ಡಿಎ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 87,031 ಮತ ದಾಖಲಿಸಿದ್ದಾರೆ. ಒಟ್ಟು 25,357 ಮುನ್ನಡೆಯಲ್ಲಿ ಸಿ.ಪಿ. ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ. ಫಲಿತಾಂಶಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತಿಚೆಗೆ , ಮೂರು ಕ್ಷೇತ್ರಗಳ ಫಲಿತಾಂಶ ಸಮೀಕ್ಷೆಯ ವಿರುದ್ಧವಾಗಿ ಬರುತ್ತೆ. ಈ ಹಿಂದೆ ಹಲವು ರಾಜ್ಯದ ಸಮೀಕ್ಷೆ ಫಲಿತಾಂಶ ಹಾಗೂ ಅಂತಿಮ ಫಲಿತಾಂಶ ತದ್ವಿರುದ್ದವಾಗಿತ್ತು. ಸಿಪಿ ಯೋಗೇಶ್ವರ್ ‘ಗೆದ್ದರೆ ನಾನೇ ಗೆದ್ದಂತೆ ಸೊತರೆ ನಾನೇ ಸೊತಂತೆ’ ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಎಂದಿದ್ದೆ ಎಂದಿದ್ದರು,

Tags :