For the best experience, open
https://m.samyuktakarnataka.in
on your mobile browser.

ಚಾರ್ಮಾಡಿ ಹೆದ್ದಾರಿ ಕಾಮಗಾರಿಗೆ ಮತ್ತೆ ವಿಘ್ನ

03:05 PM Aug 05, 2024 IST | Samyukta Karnataka
ಚಾರ್ಮಾಡಿ ಹೆದ್ದಾರಿ ಕಾಮಗಾರಿಗೆ ಮತ್ತೆ ವಿಘ್ನ

ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿ ಕಾಮಗಾರಿಗೆ ಮತ್ತೆ ವಿಘ್ನ ಬಂದಿದೆ. ಕಾಮಗಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೆಲ್ಲರು ಊರಿಗೆ ತೆರಳಲು ಸಜ್ಜಾಗಿದ್ದಾರೆ. ಆಮೆಗತಿಯಲ್ಲಿ ಸಾಗುತ್ತಿದ್ದ ಹೆದ್ದಾರಿ ಕಾಮಗಾರಿ ಇನ್ಮೆಲೆ ಕೆಲವು ದಿನ ಸಂಪೂರ್ಣವಾಗಿ ಬಂದ್ ಆಗುವಂತಹ ಸಾದ್ಯತೆ ಇದೆ. ಕಾರ್ಮಿಕರೇ ಇಲ್ಲ ಅಂತ ಅಂದ್ಮೇಲೆ ಕೆಲಸ ಮಾಡೋರಿಲ್ಲ, ಕೆಲಸ ಮಾಡೋರಿಲ್ಲ ಅಂದ್ಮೆಲೆ ಕಾಮಗಾರಿ ನಡೆಯೋದೆ ಇಲ್ಲ. ರಸ್ತೆ ಕಾಮಗಾರಿಯ ಕತೆ ಮುಂದೇನು ಎನ್ನುವಂತ ಪ್ರಶ್ನೆ ಶುರುವಾಗಿದೆ.
ಇಷ್ಟಕ್ಕೂ ಕಾರ್ಮಿಕರು ಊರಿಗೆ ಹೋಗ್ತಿರೋದು ಯಾಕೆ? ರಜೆಮೇಲೆ ಹೋಗ್ತಿದ್ದಾರಾ..? ಇಲ್ಲಾ.. ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ಡಿಪಿ ಜೈನ್ ಕಂಪನಿ, ಕಾರ್ಮಿಕರಿಗೆ ಸಂಬಳ ನೀಡಿಲ್ಲವಂತೆ. ಅದೂ ಕೂಡ 3 ತಿಂಗಳ ಸಂಬಳ ಬಾಕಿ ಇಟ್ಟಕೊಂಡಿದೆಯಂತೆ. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಇಷ್ಟು ದಿನ ಕೆಲ್ಸ ನಿಲ್ಸಿದ್ರು, ಈಗ ಊರಿಗೆ ಹೊರಟು ಬಿಟ್ಟಿದ್ದಾರೆ. ಈ ಮೂಲಕ ನಮಗೆ ನಮ್ಮ ಸಂಬಳ ಕೊಡಿ ಅಂತ ಕಾರ್ಮಿಕರು ಪ್ರತಿಭಟಿಸ್ತಾ ಇದ್ದಾರೆ. ಸ್ಥಳಕ್ಕೆ ಡಿಸಿ ಬರ್ಲೇ ಬೇಕು ಅಂತ ಒತ್ತಾಯ ಕೂಡ ಮಾಡಿದ್ದಾರೆ.
ಕೆಲವು ಕಾರ್ಮಿಕರು ಹೊರ ರಾಜ್ಯದವರಿದ್ದು ಇನ್ನು ಕೆಲವರು ಹೊರ ಜಿಲ್ಲೆಯವರೂ ಇದ್ದಾರೆ. ಸಂಬಳ ಸಿಗದೇ ಇವರಿಗೆ ಮನೆಗೆ ದುಡ್ಡು ಕಳಿಸೋಕೆ ಆಗ್ತಾ ಇಲ್ಲ. ಮಕ್ಕಳ ಸ್ಕೂಲ್ ಫೀಸ್ ಕಟ್ಟೋಕೆ ಆಗ್ತಿಲ್ಲ, ಹುಷಾರಿಲ್ಲ ಅಂದ್ರೆ ಔಷದಕ್ಕೂ ದುಡ್ಡಿಲ್ಲದ ಹಾಗಾಗಿದೆ. ಸಂಬಳ ಕೇಳಿದ್ರೆ ಇವತ್ತು ಕೊಡ್ತೇವೆ, ನಾಳೆ ಕೊಡ್ತೇವೆ ಅಂತ ಹೇಳ್ತಾ ಇದ್ದಾರೆ. ಆದ್ರೆ ಕೊಡ್ತಾ ಇಲ್ಲ, ನಾವು ಮದ್ಯಮ ವರ್ಗದ ಜನ, ಬಡವರು, ನೀವು ಸಂಬಳ ಕೊಟ್ರೆ ಮಾತ್ರ ನಾವು ಕೆಲ್ಸ ಮಾಡ್ತೇವೆ ಅಂತ ಕಾರ್ಮಿಕರು ಹೇಳ್ತಾ ಇದ್ದಾರೆ.

Tags :