ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚಿಕ್ಕಮಗಳೂರು: ಬಹುತೇಕ ಕಡೆ ಆಲಿಕಲ್ಲು ಮಳೆ

04:13 PM May 07, 2024 IST | Samyukta Karnataka

ಚಿಕ್ಕಮಗಳೂರು: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಮಂಗಳವಾರ ಆಲಿಕಲ್ಲು ಮಳೆಯಾಯಿತು.
ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಮೇ. ೭ರಿಂದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿತ್ತು. ಈ ದಿನ ಮಧ್ಯಾಹ್ನ ೪ಗಂಟೆಯ ಹೊತ್ತಿಗೆ ಮಳೆಬೀಳಲಿದೆ ಎಂದು ತಿಳಿಸಲಾಗಿತ್ತು. ಆದರೆ ೨ ಗಂಟೆಯ ಹೊತ್ತಿಗೆ ಮಳೆ ಆರಂಭವಾಗಿ ಸತತ ೧ ಗಂಟೆ ಸುರಿಯಿತು.
ಬೆಳಿಗ್ಗೆ ಸ್ವಲ್ಪ ಗುಡುಗು ಸಹಿತ ಮೋಡಕವಿದ ವಾತಾವರಣ ಉಂಟಾಯಿತು. ಇನ್ನೇನು ಮಳೆ ಬೀಳುವ ಲಕ್ಷಣಗಳು ಕಂಡುಬರುತ್ತಿದೆ ಎನ್ನುವಷ್ಟರಲ್ಲಿ ಬಿಸಿಲುಮೂಡಿ ಮೋಡ ಸರಿಯಿತು. ಬಳಿಕ ಸುಡುಬಿಸಿಲಿನ ವಾತಾವರಣ ಉಂಟಾಯಿತು.
ಇಂದು ಮಧ್ಯಾಹ್ನ ೨ ಗಂಟೆಯ ಹೊತ್ತಿಗೆ ಮೋಡಕವಿದ ವಾತಾವರಣ ಉಂಟಾಯಿತು. ಮಳೆಯಿಂದ ತಪ್ಪಿಸಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಬಂದವರು ತಮ್ಮ ವಾಹನವನ್ನೇರಿ ಮನೆಯ ಹಾದಿ ತುಳಿದರು. ಆರಂಭದಲ್ಲಿ ಚಿಟಪಟಹನಿಯೊಂದಿಗೆ ಭಾರೀ ಗಾಳಿಬೀಸತೊಡಗಿತು. ಅಂಗಡಿ ಮತ್ತು ರಸ್ತೆ ಬದಿಯಲ್ಲಿ ತೆರಳುತ್ತಿದ್ದವರು ಈ ರೀತಿಯ ಗಾಳಿಬೀಸಿದರೆ ಮಳೆತೇಲುತ್ತದೆ ಎಂದು ಭಾವಹಿಸಿದ್ದರು.

Next Article