For the best experience, open
https://m.samyuktakarnataka.in
on your mobile browser.

ಆಮಂತ್ರಣ ಕೊಡೋಕೆ ರಾಮ ಫೋನ್ ಮಾಡಿ ಹೇಳಿದ್ನ

03:31 PM Jan 21, 2024 IST | Samyukta Karnataka
ಆಮಂತ್ರಣ ಕೊಡೋಕೆ ರಾಮ ಫೋನ್ ಮಾಡಿ ಹೇಳಿದ್ನ

ಚಿಕ್ಕಮಗಳೂರು: ದೇವರ ಕಾರ್ಯಕ್ರಮಕ್ಕೆ ಆಮಂತ್ರಣ, ಗೀಮಂತ್ರಣ ಬೇಡ ಆದರೆ, ಅಲ್ಲಿ ಜಗದ್ಗುರು ಇಲ್ಲ ಇರೋದು ವಿಶ್ವಗುರು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ದೇಶದಲ್ಲಿ ಮೊದಲು ಹೇಳಿಕೆ ನೀಡಿದ್ದೇ ನಾನು ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದೂ ಧರ್ಮದ ಮುಖ್ಯಸ್ಥರು ಎಂದು ಹೇಳಿಕೊಂಡಿದ್ದಾರೆ. ಶಂಕರರು ಪ್ರಾಣ ಪ್ರತಿಷ್ಠಾನೆ ಕಾರ್ಯಕ್ರಮ ಮಾಡಿದರೇ ಧಾರ್ಮಿಕ ಕಾರ್ಯಕ್ರಮ, ಶಂಕರಾಚಾರ್ಯರು ಹೋಗಿಲ್ಲ, ವಿಶ್ವ ಗುರು ಅಲ್ಲಿಗೆ ಹೋಗಿರೋದು. ವಿಶ್ವಗುರು, ಜಗದ್ಗುರು ಅಲ್ಲ. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು ಎಂದರು.
ನಾಲ್ಕು ಶಂಕರಾಚಾರ್ಯರಲ್ಲಿ ಇಬ್ಬರು ವಿರುದ್ಧ ಇಬ್ಬರು ತಟಸ್ಥ, ಅದು ಬಿಜೆಪಿ ವಿಶ್ವಗುರು ನಡೆಸುತ್ತಿರುವ ಕಾರ್ಯಕ್ರಮ. ಆಮಂತ್ರಣ ಕೊಡೋಕೆ ಇವರ್ಯಾರು ರಾಮ ಫೋನ್ ಮಾಡಿ ಹೇಳಿದ್ನ, ಶಂಕರಾಚಾರ್ಯರು ಮಾಡಿದ್ದರೇ ನಮ್ಮಗೆ ಆಮಂತ್ರಣ ಬೇಡ ವಾಗಿತ್ತು. ದೇಶದಲ್ಲಿ 33ಕೋಟಿ ದೇವರಿದೆ. ಎಲ್ಲದರೂ ಹೋಗುತ್ತೇವೆ. ದೇವರ ಬಳಿ ಹೋಗಬೇಕು, ಇಂತಹ ದೇವರ ಬಳಿ ಹೋಗಬೇಕು ಎಂದೆನಿಲ್ಲ. ನಾವು ಭೂತ, ದೆವ್ವ, ಪೂಜೆ ಮಾಡೋರು ಭೂತದ ಬಳಿ ಹೋಗುತ್ತೇವೆ ಎಂದರು.
ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ, ಅಧಿಕಾರಕ್ಕಾಗಿ ಬೇರೆ ಬೇರೆ ಪಕ್ಷಗಳನ್ನು ಬದಲಾವಣೆ ಮಾಡುವವನಲ್ಲ, ಕೆಲವರು ಕಾಂಗ್ರೆಸ್ ನಮ್ಮದು ಅಂತಿದ್ದಾರೆ. ಅದಕ್ಕೆ ನಮ್ಮ ಅಸಮಾಧಾನ. ಸಮಾಧಾನ ಅಸಮಾಧಾನ ತಿಳಿದುಕೊಂಡ ವರಿಗೆ ಗೊತ್ತಾಗುತ್ತದೆ. ರಾಜ್ಯದ ಸಿ.ಎಂ. ಮೇಲೆ ಏಕೆ ಸಿಟ್ಟಾಗೋಣ ಎಂದರು.
ನಿಗಮ ಮಂಡಳಿ ವಿಚಾರ ಪ್ರತಿಕ್ರಿಯಿಸಿ, ನೀವು ಸರ್ಕಾರದ ವನ್ನು ಕೇಳಬೇಕು ನಾನು ಸರ್ಕಾರವಲ್ಲ, ನಾನು ಹೊರಗೆ ಇದ್ದೀನಿ, ಯಾವ ಮಾನದಂಡ ದಲ್ಲಿ ನಿಗಮ‌ ಮಂಡಳಿಗೆ ನೇಮಕ ಮಾಡಿದ್ದಾರೆ ಅವರನ್ನೇ ಕೆಳಬೇಕು. ಯಾವ ಮಾನದಂಡ ದಲ್ಲಿ ಮಾಡಿದ್ದಾರೆ ನನಗೆ ಗೊತ್ತಿಲ್ಲ ಎಂದರು.
ಮಾಡ್ತಿರೋದು ಗೊತ್ತಿಲ್ಲ, ನಿಂತಿರೋದು ಗೊತ್ತಿಲ್ಲ, ಮುಂದಾಗೋದು ಗೋತ್ತಿಲ್ಲ, ನಾನೇಕೆ ಕಾಂಗ್ರೆಸ್ ಮೇಲೆ ಅಸಮಾಧಾನ ಆಗಲಿ, ನಾನು ವಿದ್ಯಾರ್ಥಿ ಆಗಿದ್ದಾಗಿನಿಂದ ಕಾಂಗ್ರೆಸ್ ನಲ್ಲಿ ಇದ್ದೀನಿ ಎಂದರು.