For the best experience, open
https://m.samyuktakarnataka.in
on your mobile browser.

ರಾಮೇಶ್ವರಂ ಕೆಫೆ ಸ್ಫೋಟ: ಅಗತ್ಯ ಬಿದ್ದರೇ ಎನ್‌ಐಎಗೆ ಪ್ರಕರಣ

02:18 PM Mar 03, 2024 IST | Samyukta Karnataka
ರಾಮೇಶ್ವರಂ ಕೆಫೆ ಸ್ಫೋಟ  ಅಗತ್ಯ ಬಿದ್ದರೇ ಎನ್‌ಐಎಗೆ ಪ್ರಕರಣ

ಚಿಕ್ಕಮಗಳೂರು: ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ ಸಿಸಿಬಿಗೆ ನೀಡಿದ್ದೇವೆ. ಅಗತ್ಯ ಬಿದ್ದರೇ ಎನ್‌ಐಎಗೆ ವಹಿಸುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಾಂಬ್ ಬ್ಲಾಸ್ಟ ಪ್ರಕರಣ ಸಿಲ್ಲಿ ಪ್ರಕರಣ ಅಲ್ಲ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಕ್ಕೆ ಜನರ ಭದ್ರತೆ ಮುಖ್ಯ, ಜನರಿಗೆ ಸೆಕ್ಯೂರಿಟಿ ಕೊಡಬೇಕು ಎಂದು ಶರಣ್ ಗೌಡ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಎನ್‌ಐಎಗೆ ನೀಡಬೇಕೆಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿ, ಪ್ರಕರಣವನ್ನು ಸಿಸಿಬಿಗೆ ನೀಡಿದ್ದೇವೆ. ತನಿಖೆ ಆರಂಭವಾಗಿದೆ. ಯಾರು ಸಿಕ್ಕಿಲ್ಲ. ಸಿಕ್ಕರೇ ನೋಡೋಣ, ಅಗತ್ಯ ಬಿದ್ದರೇ ನೀಡಲಾಗುವುದು ಎಂದರು.
ಬ್ರಾಂಡ್ ಬೆಂಗಳೂರು ಬಾಂಬ್ ಬೆಂಗಳೂರು ‌ಆಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಬೆಜೆಪಿ ಅವರ ಕಾಲದಲ್ಲೂ ಬಾಂಬ್ ಬ್ಲಾಸ್ಟ್ ಆಗಿತ್ತು. 2008ರಲ್ಲಿ ನಾಲ್ಕು ಬಾರೀ ಬಾಂಬ್ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಪ್ರಕರಣ ಸಮರ್ಥನೆ ಮಾಡುತ್ತಿಲ್ಲ ಬಿಜೆಪಿ ರಾಜಕೀಯ ಮಾಡಬಾರದು ಎಂದರು.