ಲೋಕಾಯುಕ್ತ ಬಲೆಗೆ ಬಿಇಒ ಕಚೇರಿ ಎಸ್.ಡಿ.ಎ
ಚಿಕ್ಕಮಗಳೂರು: ನಿವೃತ್ತ ಮುಖ್ಯೋಪಾಧ್ಯಾಯನಿಂದ 40 ಸಾವಿರ ಲಂಚ ಪಡೆಯುವ ವೇಳೆ ಬೀರೂರು ಬಿಇಒ ಕಚೇರಿ ಎಸ್.ಡಿ.ಎ ಚಂದ್ರಶೇಖರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ನೀವು ಸರ್ಕಾರಕ್ಕೆ ಕಟ್ಟಬೇಕಾದ ಟ್ಯಾಕ್ಸ್ ಉಳಿಸಿಕೊಡುತ್ತೇನೆ ಬಂದ ಹಣದಲ್ಲಿ ಇಬ್ಬರು ಫಿಫ್ಟಿ ಫಿಫ್ಟಿ ಮಾಡಿಕೊಳ್ಳೊಣ ಎಂದು ನಿವೃತ್ತ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ನ ಜಿ.ಪಿ.ಎಫ್, ಜಿಐಎಸ್ ಹಣದ ಮೆಚ್ಯೂರಿಣಿ ಮಾಡಿಕೊಡಲು 40 ಸಾವಿರ ಲಂಚ ಪಡೆಯುವ ವೇಳೆ ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎಸ್.ಡಿ.ಎ ಚಂದ್ರಶೇಖರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ತರೀಕೆರೆ ತಾಲ್ಲೂಕಿನ ಹೊಸಗಂಗೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ವಯೋ ನಿವೃತ್ತಿ ಹೊಂದಿದ ಎನ್.ಪರಮೇಶ್ ತಮ್ಮ ನಿವೃತ್ತಿ ನಂತರ ಸರ್ಕಾರದಿಂದ ಬರಬೇಕಾದ ಜಿ.ಪಿ.ಎಫ್ ಹಾಗೂ ಜಿ.ಐಎಸ್ ಪಡೆದುಕೊಳ್ಳಲು ಬೀರೂರು ಬಿಇಒ ಕಚೇರಿಗೆ ತೆರಳಿದ ವೇಳೆ ನೀವು ಸರ್ಕಾರಕ್ಕೆ ಕಟ್ಡಬೇಕಿದ್ದ ಟ್ಯಾಕ್ಸ್ ಉಳಿಸಿಕೊಂಡಿದ್ದೀರಿ, ಅದರ ಬಾಕಿ ಇದೆ. ಅದನ್ನು ನಾನು ಸರಿ ಮಾಡುತ್ತೇನೆ. ನನಗೆ ಬಂದ ಹಣದಲ್ಲಿ ಅರ್ಧ ಕೊಡಬೇಕು ಎಂದು ಲಂಚಕ್ಕೆ ಬೇಡಿಕೆ ಇಟ್ಡಿರುತ್ತಾನೆ. ಸೋಮವಾರ ಎಸ್.ಡಿ.ಎ ಚಂದ್ರಶೇಖರ್ 40 ಸಾವಿರ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಕಾರ್ಯಾಚರಣೆಯಲ್ಲಿ ಲೋಕಾ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಸಿಬ್ಬಂದಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.