ಚಿಕ್ಕ ಚಿಕ್ಕ ಯೋಜನೆಯನ್ನು ಚೊಕ್ಕವಾಗಿ ಮಾಡುವುದೇ ನಮ್ಮ ಸಂಕಲ್ಪ
ಧಾರವಾಡ: ಪ್ರತೀ ಚಿಕ್ಕ ಚಿಕ್ಕ ಯೋಜನೆಯನ್ನು ಚೊಕ್ಕವಾಗಿ ಮಾಡುವುದೇ ನಮ್ಮ ಸಂಕಲ್ಪ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಅವಳಿನಗರದ ಅಭಿವೃದ್ದಿಯ ಕುರಿತು ಪೋಸ್ಟ್ ಮಾಡಿರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್ನಲ್ಲಿ ವಿದ್ಯಾ ಕಾಶಿ ಎಂದೇ ಪ್ರಖ್ಯಾತವಾದ ನಮ್ಮ ಹೆಮ್ಮೆಯ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಳಿ ಇರುವ ಶ್ರೀನಗರ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಎಲ್ಸಿ ನಂ.299 ರಲ್ಲಿಯ ರೈಲ್ವೆ ರಸ್ತೆ ಕೆಳ ಸೇತುವೆ ಮತ್ತು ವರ್ತುಲದ ಮುನ್ನೋಟ. ಈ ಯೋಜನೆಯ ಕುರಿತಾಗಿ ಶಾಸಕರಾದ ಅರವಿಂದ ಬೆಲ್ಲದ್ ಅವರು ಈಗಾಗಲೇ ಯೋಜನೆಯನ್ನು ಕಾರ್ಯಗತಗೊಳಿಸಲು ನನ್ನೊಂದಿಗೆ ಚರ್ಚಿಸಿದ್ದು, ನಾನು ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಯೋಜನೆಗೆ ಅನುಮೋದನೆ ಒದಗಿಸಿದ್ದೇನೆ. ಪ್ರತೀ ಚಿಕ್ಕ ಚಿಕ್ಕ ಯೋಜನೆಯನ್ನು ಚೊಕ್ಕವಾಗಿ ಮಾಡುವುದೇ ನಮ್ಮ ಸಂಕಲ್ಪ. ನಮ್ಮ ಪ್ರತಿಯೊಂದು ಯೋಜನೆಗಳಿಗೂ ಸಹಕರಿಸಿ ಅನುಮೋದನೆ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಅಧಿಕಾರಿಗಳಿಗೆ ಧನ್ಯವಾದಗಳು ಎಂದಿದ್ದಾರೆ.