ಚಿರತೆ ಪ್ರತ್ಯಕ್ಷ: ಭಯದಲ್ಲಿ ಗ್ರಾಮಸ್ಥರು
ಅಳ್ನಾವರ: ತಾಲೂಕಿನ ಕೋಗಿಲಗೇರಿ ಗ್ರಾಮದ ಜಮೀನೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮದ ರೈತ ಸಂಗಮೇಶ ದೂಪದಾಳ ಅವರ ಹೊಲದಲ್ಲಿರುವ ಮನೆಯ ಆವರಣಕ್ಕೆ ರಾತ್ರಿ ಚಿರತೆ ಬಂದಿರುವುದು, ಮನೆಯ ಹೊರಗಡೆ ಕಟ್ಟಿದ ಶ್ವಾನವನ್ನು ಚಿರತೆ ಹಿಡಿದ ದೃಶ್ಯವೂ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಚಿರತೆ ಬಂದ ವಿಷಯವನ್ನು ಮನೆ ಮಾಲೀಕರು, ಗ್ರಾಮಸ್ಥರು ಅಳ್ನಾವರ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿರತೆ ಬೇಗ ಪತ್ತೆ ಹಚ್ಚಿ
ಚಿರತೆ ಗ್ರಾಮದ ಹೊರ ವಲಯದಲ್ಲಿ ಕಾಣಿಸಿಕೊಂಡಿದ್ದು ಆತಂಕವಾಗಿದೆ. ಗ್ರಾಮದ ಹೊರಗಡೆ ಹೋಗಲು ಭಯ ಸೃಷ್ಟಿಯಾಗಿದೆ. ಎಲ್ಲಿಯೇ ಎಲ್ಲೊ ಊರಲ್ಲಿಯೇ ಬಂದಿದೆಯೊ ಏನೊ ಎಂಬುಷ್ಟರ ಮಟ್ಟಿಗೆ ಹೆದರಿಕೆ ಆಗುತ್ತಿದೆ. ಚಿರತೆ ಬಂದ ದಾರಿ, ಸುಳಿವು ಪತ್ತೆ ಹಚ್ಚಿ ಬೇಗ ಹಿಡಿಯಬೇಕು. ರೈತರು ರಾತ್ರಿ ಹೊತ್ತು ಜಮೀನಿಗೆ ತೆರಳುತ್ತಾರೆ. ಈಗ ಚಿರತೆ ಬಂದಿರುವುದು ಜಮೀನಿಗೆ ತೆರಳದಂತೆ ಆಗುವ ಪರಿಸ್ಥಿತಿ ಬಂದಿದೆ ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
ಗ್ರಾಮಸ್ಥರ ಅಹವಾಲು ಆಲಿಸಿದ ಅಧಿಕಾರಿ ಚಿರತೆ ಪತ್ತೆ ಕಾರ್ಯ ನಡೆಸುತ್ತಿದ್ದು, ಆತಂಕಗೊಳ್ಳದೇ ಧೈರ್ಯವಾಗಿರಿ ಎಂದು ಸಮಾಧಾನ ಪಡಿಸಿದರು.