ಛತ್ರಪತಿ ಪಾತ್ರದಲ್ಲಿ ರಿಷಬ್: ಐತಿಹಾಸಿಕ ಚಿತ್ರದಲ್ಲಿ ಕಾಂತಾರ ಹೀರೋ
ಬೆಂಗಳೂರು: ನಟ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಐತಿಹಾಸಿಕ ಚಿತ್ರದಲ್ಲಿ ನಟಿಸಲಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ನಮ್ಮ ಗೌರವ ಮತ್ತು ವಿಶೇಷತೆ, ಭಾರತದ ಮಹಾನ್ ಯೋಧ ರಾಜನ ಮಹಾ ಕಾವ್ಯವನ್ನು ಪ್ರಸ್ತುತಪಡಿಸುವುದು - ಭಾರತದ ಹೆಮ್ಮೆ: # ಛತ್ರಪತಿ ಶಿವಾಜಿ ಮಹಾರಾಜ್. #ಭಾರತ್ ಛತ್ರಪತಿ ಶಿವಾಜಿ ಮಹಾರಾಜರ ಹೆಮ್ಮೆ ಇದು ಕೇವಲ ಚಲನಚಿತ್ರವಲ್ಲ - ಎಲ್ಲಾ ವಿಲಕ್ಷಣಗಳ ವಿರುದ್ಧ ಹೋರಾಡಿದ, ಮೈಟಿ ಮೊಘಲ್ ಸಾಮ್ರಾಜ್ಯದ ಶಕ್ತಿಗೆ ಸವಾಲು ಹಾಕಿದ ಮತ್ತು ಎಂದಿಗೂ ಮರೆಯಲಾಗದ ಪರಂಪರೆಯನ್ನು ರೂಪಿಸಿದ ಯೋಧನನ್ನು ಗೌರವಿಸುವ ಯುದ್ಧದ ಕೂಗು. # ಛತ್ರಪತಿ ಶಿವಾಜಿ ಮಹಾರಾಜರ ಹೇಳಲಾಗದ ಕಥೆಯನ್ನು ನಾವು ಬಿಚ್ಚಿಡುತ್ತಿದ್ದೆವೆ ಎಂದಿದ್ದಾರೆ. ಅಲ್ಲದೆ ಈ ಚಿತ್ರ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಆಗಲಿದ್ದು 2027 ಜನವರಿ 21 ರಂದು ತೆರೆ ಕಾಣಲಿದೆ ಎಂದು ತಿಳಿಸಿದ್ದಾರೆ, ಬಾಲಿವುಡ್ ಖ್ಯಾತ ನಿರ್ಮಾಪಕ ಕಂ ನಿರ್ದೇಶಕ ನಿರ್ದೇಶಕ ಸಂದೀಪ್ ಸಿಂಗ್ ಅವರ ಹಿಸ್ಟೋರಿಕಲ್ ಡ್ರಾಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದಲ್ಲಿ ಶಿವಾಜಿಯ ಪಾತ್ರದಲ್ಲಿ ರಿಷಬ್ ಕಾಣಿಸಿಕೊಳ್ಳಲಿದ್ದಾರೆ. 17ನೇ ಶತಮಾನದ ಭಾರತೀಯ ದೊರೆ ಶಿವಾಜಿ ಭೋಂಸ್ಥೆ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿರಲಿದ್ದು, ರಿಷಬ್ ಶಿವಾಜಿ ಪಾತ್ರವನ್ನು ಮಾಡಲಿದ್ದಾರೆ. ಯುದ್ಧಕ್ಕೆ ನಿಂತ ಸಾಮ್ರಾಟನಂತೆ ರಿಷಬ್ ಶಿವಾಜಿಯಾಗಿ ಕಾಣಿಸಿಕೊಂಡಿರುವ ಪೋಸ್ಟರ್ ರಿಲೀಸ್ ಆಗುವ ಮೂಲಕ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಿದೆ. ಸಂದೀಪ್ ಸಿಂಗ್ ಅವರು 2024ರ ಫೆಬ್ರುವರಿ 16ರಂದು ಈ ಸಿನಿಮಾವನ್ನು ಘೋಷಿಸಿದ್ದರು. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿ ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.