For the best experience, open
https://m.samyuktakarnataka.in
on your mobile browser.

ಜನಗಣತಿ ಕೋಲ್ಡ್‌ ಸ್ಟೋರೆಜ್‌ನಲ್ಲಿಟ್ಟರು ಎಂದವರಿಗೆ ಈಗ ಬಿಸಿತುಪ್ಪವಾಗಿದೆ

04:17 PM Oct 08, 2024 IST | Samyukta Karnataka
ಜನಗಣತಿ ಕೋಲ್ಡ್‌ ಸ್ಟೋರೆಜ್‌ನಲ್ಲಿಟ್ಟರು ಎಂದವರಿಗೆ ಈಗ ಬಿಸಿತುಪ್ಪವಾಗಿದೆ

ಬೆಂಗಳೂರು : ಸಮೀಕ್ಷೆ ಅಧಿಕೃತವಾಗಿದೆ ಅದು ಯಾರೋ ನಾಲ್ಕು ಜನ ಸೇರಿ ಮಾಡಿದ ವರದಿಯಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರದಿ ಬಿಡುಗಡೆ ಕುರಿತಂತೆ, ಜಾತಿ ಜನಗಣತಿ ವರದಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಟೀಕೆ ಮಾಡಿದರು. ಈಗ ವರದಿಯ ಕುರಿತು ಚರ್ಚಿಸಲು ಮುಂದಾಗುತ್ತಿದ್ದಂತೆ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗುತ್ತಿದ್ದು, ಗದ್ದಲ ಎಬ್ಬಿಸುತ್ತಿದ್ದಾರೆ, ರಾಜ್ಯದಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹೆಚ್ಚಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅದರ ಆದಾರದ ಮೇಲೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಅದಕ್ಕಾಗಿ ಸಂಪುಟದಲ್ಲಿ ವರದಿಯನ್ನು ಚರ್ಚಿಸಲು ನಿರ್ಧರಿಸಲಾಗಿದೆ. ಇದೇ ತಿಂಗಳ 18ರಂದು ನಡೆಯಲಿರುವ ಸಭೆಯಲ್ಲಿ ವರದಿ ಚರ್ಚೆಯಾಗಲಿದೆ ಎಂದು ಹೇಳಿದರು. ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯ ಬೆಂಬಲ ನೀಡದಿರುವುದು ಪ್ರಶ್ನೆಯಲ್ಲ. ವಸ್ತುಸ್ಥಿತಿ ಏನು ಎಂಬುದು ಮುಖ್ಯ. ರಾಷ್ಟ್ರ ಮಟ್ಟದಲ್ಲಿ ಗಣತಿ ಮಾಡುವಾಗಲೂ ಈ ರೀತಿಯ ಚರ್ಚೆಗಳು ನಡೆಯಲಿವೆಯೇ. ಅದು ಯಾರೋ ನಾಲ್ಕು ಜನ ಸೇರಿ ಮಾಡಿದ ವರದಿಯಲ್ಲ. ಸರ್ಕಾರವೇ ಕೈಗೊಂಡ ಕ್ರಮ. 10 ವರ್ಷಗಳ ಬಳಿಕ ಜನಸಂಖ್ಯೆಯಲ್ಲಿ ಒಂದಿಷ್ಟು ಏರುಪೇರುಗಳಾಗಿರುತ್ತವೆ. ಪ್ರಸ್ತುತ ಅದನ್ನು ಪರಿಗಣಿಸಲು ಯಾವ ಮಾನದಂಡ ಅನುಸರಿಸಬೇಕು ಎಂಬುದನ್ನು ವಿಶ್ಲೇಷಿಸಲಾಗುವುದು. ವರದಿಯ ಬಗ್ಗೆ ಅಧ್ಯಯನ ನಡೆಸಲು ಸಂಪುಟ ಉಪಸಮಿತಿ ರಚಿಸಬೇಕೆ ಅಥವಾ ವಿಧಾನಮಂಡಲದಲ್ಲಿ ಮಂಡನೆ ಮಾಡಬೇಕೇ ಎಂದು ಚರ್ಚಿಸಲಾಗುವುದು ಎಂದರು.

Tags :