For the best experience, open
https://m.samyuktakarnataka.in
on your mobile browser.

ಜನಪ್ರಿಯತೆ ಪಡೆದ ಹಳ್ಳಿ ಕ್ರೀಡೆ ಲ️ಗೋರಿ

09:39 AM Oct 28, 2024 IST | Samyukta Karnataka
ಜನಪ್ರಿಯತೆ ಪಡೆದ ಹಳ್ಳಿ ಕ್ರೀಡೆ ಲ️ಗೋರಿ

ಮುಕುಂದ್ ಶೆಟ್ಟಿ
ಬೆಂಗಳೂರು: ಇದು ನಾವು-ನೀವೆಲ್ಲಾ ಬಾಲ️್ಯದಲ್ಲಿ ನಮ್ಮ ಮನೆಯಂಗಳದಲ್ಲೇ ಆಡಿದ ಆಟ. ಮರಕೋತಿಯಾಟ, ಕುಂಟೆಬಿ️ಲ್ಲೆ, ಚಿನ್ನಿದಾಂಡು ಚೌಕಾಬಾರ, ಗೋಲಿಯಾಟ, ಕಳ್ಳಪೊಲೀಸ್, ಬುಗುರಿ ಆಟಗಳು ಈಗ ನಮ್ಮನ್ನು ಬಿ️ಟ್ಟು ಮಾಯವಾಗಿಬಿ️ಟ್ಟಿವೆ. ಆದರೆ, ಲ️ಗೋರಿ ಮಾತ್ರ ಹಳ್ಳಿಯಿಂದ ದಿಲ್ಲಿಗೆ ತಲುಪಿದೆ. ದಿನ ದಿನಕ್ಕೂ ಈ ಕ್ರೀಡೆ ತನ್ನ ಮಾರ್ಪಡು ಬದಲಿಸಿಕೊಂಡು, ವೃತ್ತಿಪರ ಕ್ರೀಡೆಯಾಗಿ ಬೆಳೆದು ನಿಲ್ಲುತ್ತಿದೆ. ಇದಕ್ಕೆ ಸಾಕ್ಷಿಯೇ ನಮ್ಮ ರಾಜ್ಯದ ಲ️ಗೋರಿ ತಂಡವು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡು ಯಶಸ್ವಿಯಾಗಿರುವುದು.
ರಾಜ್ಯ ಅಮೆಚೂರ್ ಲ️ಗೋರಿ ಸಂಸ್ಥೆ ಈಗ ರಾಜ್ಯದಲ್ಲಿ ಸಾಕಷ್ಟು ಶ್ರಮವಹಿಸಿ, ಈ ಗ್ರಾಮೀಣ ಕ್ರೀಡೆಯನ್ನು ಅತ್ಯುನ್ನತ ಸ್ಥಾನಕ್ಕೆ ಕರೆದೊಯ್ಯುತ್ತಿದೆ. ಇದಕ್ಕಾಗಿ ನಗರದ ಪಟ್ಟಣಗೆರೆಯಲ್ಲಿರುವ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠದಲ್ಲಿ ಸೂಕ್ತ ತರಬೇತಿ ನೀಡಲಾಗುತ್ತಿದೆ. ರಾಜ್ಯ ಅಮೆಚೂರು ಲ️ಗೋರಿ ಸಂಸ್ಥೆಗೆ ಕಾರ್ಯದರ್ಶಿಯಾಗಿರುವ ಟಿ.ಬಿ️. ರಾಜೇಶ್ ಅವರ ಮಾರ್ಗದರ್ಶನವಿದೆ. ಅಲ️್ಲದೆ ೨೦೧೨ರ ಲ️ಂಡನ್ ಪ್ಯಾರಾಲಿಂಪಿಕ್ಸ್ನಲ್ಲಿ ಕೊನೆ ಬಾರಿಗೆ ಪದಕ ಗೆದ್ದು ತಂದAತಹ ಎಚ್. ಎನ್. ಗಿರೀಶ್ ಅವರ ಅವಿರತ ಶ್ರಮವಿದ್ದು, ಬಾಲ️ಕ-ಬಾಲ️ಕಿಯರ ತಂಡಗಳು ಈಗಾಗಲೇ ದೇಶಾದ್ಯಂತ ಹಲ️ವು ಟೂರ್ನಿಗಳಲ್ಲಿ ಟ್ರೋಫಿಗಳನ್ನು ಗೆದ್ದು ರಾಜ್ಯದ ಖ್ಯಾತಿ ಹೆಚ್ಚಿಸಿದ್ದಾರೆ. ಮಹಾರಾಷ್ಟçದ ರತ್ನಗಿರಿಯಲ್ಲಿ ಇತ್ತೀಚ್ಛಿಗಷ್ಟೇ ಅಂತ್ಯಗೊಂಡ ೮ನೇ ಜೂನಿಯರ್ ಅಮೆಚೂರ್ ಲ️ಗೋರಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪಡೆ ಬೆಳ್ಳಿ ಪದಕ ಗೆದ್ದು ಬೀಗಿದೆ.
ವಿದೇಶಗಳಲ್ಲೂ ಲ️ಗೋರಿ ಫೇಮಸ್
ನಮ್ಮ ದೇಶೀಯ ಕ್ರೀಡೆ ಎನ್ನಿಸಿಕೊಂಡಿರುವ ಲ️ಗೋರಿ, ವಿಶ್ವದಾದ್ಯಂತ ತನ್ನ ವಿಸ್ತೀರ್ಣ ಬೆಳೆಸಿಕೊಂಡಿದೆ. ಅಮೆರಿಕ, ಮಲೇಶ್ಯಾ, ಪಾಕಿಸ್ತಾನ, ಭೂತಾನ್ ಸೇರಿದಂತೆ ಈಗಾಗಲೇ ೨೦ಕ್ಕೂ ಹೆಚ್ಚು ರಾಷ್ಟಗಳಲ್ಲಿ ಲ️ಗೋರಿ ಚಾಲ್ತಿಯಲ್ಲಿದೆ. ಹಲ️ವು ಆಟಗಾರರು ಈ ಲ️ಗೋರಿಯತ್ತ ಆಸಕ್ತಿ ತೋರುತ್ತಿದ್ದು, ಈಗ ರಾಷ್ಟ್ರೀಯ  ಮಟ್ಟದ ಟೂರ್ನಿಗಳು ಆಯೋಜನೆಗೊಳ್ಳುವವರೆಗೂ ಈ ಕ್ರೀಡೆ ಬೆಳೆದಿರುವುದು ದೇಶಕ್ಕೇ ಹೆಮ್ಮೆಯ ಸಂಗತಿಯಾಗಿದೆ.
ನಮ್ಮ ದೇಶದಲ್ಲಿ ಈ ಲ️ಗೋರಿಯನ್ನು ಸತೋಲಿಯಾ, ಪಿಟ್ಟು, ಏಳು ಕಲ್ಲುಗಳ ಆಟ ಎಂದೂ ಕರೆಯಲಾಗುತ್ತಿದೆ. ಅಷ್ಟೇ ಅಲ್ಲದೇ, ನಮ್ಮ ಪುರಾತನ ಗ್ರಂಥ ಗಳಲ್ಲೂ ಈ ಲ️ಗೋರಿ ಬಗ್ಗೆ ಉಲ್ಲೇಖವಿದೆ. ಕ್ರಿಕೆಟ್, ಬ್ಯಾಡ್ಮಿಂಟನ್, ಟೆನಿಸ್‌ನಂತಹ ದುಬಾರಿ ಕ್ರೀಡೆಗಳ ಮಧ್ಯೆ ಲ️ಗೋರಿ ಕೈಗೆಟಕುವ ಕ್ರೀಡೆಯಾಗಿರುವುದು ಕೂಡ ಜನಪ್ರಿಯತೆ ಹೆಚ್ಚಾಗಲು ಕಾರಣವಾಗಿದೆ. ಇಷ್ಟೇ ಅಲ್ಲದೇ, ಇದು ಮನೆ-ಮನೆಯ ಆಟ, ಎಲ್ಲಾ ಪೋಷಕರಿಗೂ ಈ ಲ️ಗೋರಿ ಬಗ್ಗೆ ಅರಿವಿರುವುದರಿಂದ, ತಮ್ಮ ಮಕ್ಕಳಿಗೆ ಈ ಲ️ಗೋರಿ ಕಲಿಸಲು ಸೂಕ್ತ ಉತ್ತೇಜನ ಸಿಗುತ್ತಿದೆ.
ನಿಯಮಗಳೇ ಪ್ರಮುಖ
ಮೊದಲಿಗೆ ಲ️ಗೋರಿ ಕ್ರೀಡೆ ಮೊದಲಿನಂತಿಲ️್ಲ. ತನ್ನ ಸ್ವರೂಪವನ್ನು ಕೊಂಚ ಬದಲಾಯಿಸಿಕೊಂಡಿದೆ. ಕಲ್ಲು-ಚೆಂಡುಗಳೊಂದಿಗೆ ಆಡಲಾಗುತ್ತಿದ್ದ ಈ ಕ್ರೀಡೆಯನ್ನು ಈಗ ಇದಕ್ಕೇ ಆದಂತಹ ಆಟಿಕೆಗಳು ಬಂದಿವೆ. ಇದಕ್ಕೆ ಆದಂತಹ ನಿಯಮಗಳು ರೂಪುಗೊಂಡಿವೆ. ಮೈದಾನದ ವಿಸ್ತೀರ್ಣವೂ ೮೧ ಅಡಿ ಉದ್ದ, ೪೫ ಅಡಿ ಅಗಲ️ವಿರಬೇಕಾಗುತ್ತದೆ. ಒಂದು ತಂಡದಲ್ಲಿ ೧೫ ಮಂದಿ ಇರಲಿದ್ದು, ಇದರಲ್ಲಿ ಮೈದಾನದಲ್ಲಿ ೧೨ ಮಂದಿ ಕಾಣಿಸಿಕೊಳ್ಳಲಿದ್ದು, ಉಳಿದ ಮೂವರು ಹೆಚ್ಚುವರಿ ಆಟಗಾರರಾಗಿರುತ್ತಾರೆ. ಅಷ್ಟೇ ಅಲ️್ಲದೇ ೩ ಅಥವಾ ೫ ನಿಮಿಷಗಳ ೩ ಸೆಟ್‌ಗಳನ್ನು ಈ ಲ️ಗೋರಿ ಹೊಂದಿರುತ್ತದೆ.
ಈ ಕರ್ನಾಟಕ ಲ️ಗೋರಿ ಅಸೋಸಿಯೇಷನ್‌ನಲ್ಲಿ ತರಬೇತಿ ಪಡೆಯುತ್ತಿರುವ ಬಾಲ️ಕ-ಬಾಲ️ಕಿಯರ ತಂಡಗಳಿಗೆ ತರಬೇತಿ ನೀಡುತ್ತಿರುವ ಪರಮಶಿವಂ, ಲ️ಗೋರಿ ಬೆಳವಣಿಗೆಯಲ್ಲೂ ಪಾತ್ರ ವಹಿಸಿದ್ದು, ರಾಜ್ಯ ಅಮೆಚೂರ್ ಲ️ಗೋರಿ ಅಸೋಸಿಯೇಷನ್‌ನ ನೆರವಿನ ಬಗ್ಗೆ ಸಾಕಷ್ಟು ಸಂತಸ ವ್ಯಕ್ತಪಡಿಸಿದ್ದಾರೆ.
ಇಷ್ಟೇ ಅಲ್ಲದೇ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ಕೂಡ ರೀತಿಯ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡುತ್ತಿದ್ದು, ಶೇ.೬೦%ರಷ್ಟು ವಿದ್ಯೆ, ಶೇ.೨೦%ರಷ್ಟು ಕಲೆ, ಹಾಗೂ ಶೇ. ೨೦%ರಷ್ಟು ಕ್ರೀಡೆಯನ್ನು ತನ್ನ ವಿದ್ಯಾಭ್ಯಾಸದಲ್ಲಿ ಅಳವಡಿಸಿಕೊಂಡಿದೆ. ಹಾಗಾಗಿ, ರಾಜ್ಯದಲ್ಲಿ ಲ️ಗೋರಿ ವೇಗವಾಗಿಯೇ ಅಬಿ️üವೃದ್ಧಿಯತ್ತ ಹೆಜ್ಜೆಯನ್ನು ಇಟ್ಟಿದೆ.