ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜನರಿಗೋಸ್ಕರ ಶುರುವಾದ ನ್ಯಾನೋ

11:14 PM Oct 10, 2024 IST | Samyukta Karnataka

ಅಂದು ಮುಂಬೈನಲ್ಲಿ ವಿಪರೀತ ಮಳೆ. ಆ ಮಳೆಯಲ್ಲೇ ಕುಟುಂಬವೊಂದರ ಪಯಣ ಸಣ್ಣ ಸ್ಕೂಟರ್ ಮೇಲೆ ಸಾಗಿತ್ತು. ಹೆಂಡತಿ, ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ತಂದೆ ಸ್ಕೂಟರ್ ಓಡಿಸುತ್ತಿದ್ದ. `ಇಂಥಾ ಮಳೆಯಲ್ಲಿ, ಸ್ಕೂಟರ್ ಸ್ಕಿಡ್ ಆಗಿ ಬಿದ್ದರೆ ಆ ಕುಟುಂಬದ ಕತೆ ಏನು' ಎಂಬ ವಿಚಾರ ಅಲ್ಲೇ ಕಾರ್‌ನಲ್ಲಿ ಕೂತು ಈ ದೃಶ್ಯವನ್ನು ನೋಡುತ್ತಿದ್ದ ರತನ್ ಟಾಟಾ ಮನಸ್ಸಿನಲ್ಲಿ ಹಾದು ಹೋಯಿತು. ಅದೇನು ದುರದೃಷ್ಟವೋ ರತನ್ ಟಾಟಾ ಅಂದುಕೊಂಡ ಹಾಗೆಯೇ ಆಯಿತು. ಆ ಕ್ಷಣಕ್ಕೆ ರತನ್ ಅವರ ತಲೆಯಲ್ಲಿ ಶುರುವಾದದ್ದೇ, ಭಾರತದ ಮಧ್ಯಮ ವರ್ಗಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುವಂಥ ಕಾರ್‌ವೊಂದನ್ನು ತಯಾರಿಸುವ ವಿಚಾರ. ಅಂದುಕೊಂಡದನ್ನು ಕೆಲವೇ ವರ್ಷದಲ್ಲಿ ರತನ್ ಟಾಟಾ ಮಾಡಿ ತೋರಿಸಿದ್ದರು. ಕೈಗೆಟುಕುವ ದರದಲ್ಲಿ ದೊರೆಯುವಂಥ ಟಾಟಾ ನ್ಯಾನೋ ಕಾರ್ ೨೦೦೮ರಲ್ಲಿ ಮಾರುಕಟ್ಟೆಗೆ ಬಂದಿತ್ತು.

Tags :
#RatanTatatata
Next Article