ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜನ ಪ್ರಯೋಜನವೇ ಆರಾಧನೆ

04:05 AM Jan 10, 2025 IST | Samyukta Karnataka

ಬುದ್ಧಿಯನ್ನು ಮಾನವೀಯ ಮೌಲ್ಯಗಳಿಗಾಗಿ ಉಪಯೋಗಿಸಿ. ಮಾತನಾಡುವ ಮೊದಲು, ಕ್ರಮ ಕೈಗೊಳ್ಳುವ ಮೊದಲು, ಇನ್ನೊಬ್ಬರಿಗೆ ಒಳ್ಳೆಯದಾಗುವ ಸಾಧಕ-ಬಾಧಕ ಪರಿಣಾಮಗಳ ಬಗ್ಗೆ ವಿಚಾರ ಮಾಡಿ' ಎಂದು ಮುಂತಾಗಿ ಎಲ್ಲ ಧರ್ಮಾಧಿಕಾರಿಗಳ ಉಪದೇಶ, ಸಂದೇಶ. ಕೆಲಸಕ್ಕೆ ಬಾರದ ನಿರುಪಯೋಗಿ ಚಟುವಟಿಕೆ, ಮಾತು, ಚರ್ಚೆಗಳಿಂದ ದೂರವಿರಲು ಸಹ ಸೂಚನೆಗಳನ್ನು ನೀಡಲಾಗಿದೆ. ಕುರಾನ್ ಯಾವಾಗಲೂ ಉದ್ದೇಶಿತ ಜೀವನವನ್ನು ಪ್ರತಿಪಾದಿಸುತ್ತದೆ. ಉದ್ದೇಶರಹಿತ ಕೆಲಸಕಾರ್ಯಗಳಿಂದ ದೂರವಿರಲು ಆಜ್ಞಾಪಿಸುತ್ತದೆ. ಕುರಾನಿನ ಅಧ್ಯಾಯ ಮೋಮಿನೊನ್ (೨೩:೧-೩) ವಚನದಲ್ಲಿ,ಧರ್ಮಾಚರಣೆ ಮಾಡುವವರಿಗೆ ಖಂಡಿತವಾಗಿ ಜಯ ಸಿಗುತ್ತದೆ. ಅವರು ಅನಗತ್ಯ (ಕೆಲಸಕ್ಕೆ ಬಾರದ) ಕಾರ್ಯಗಳಿಂದ ದೂರವಿರುತ್ತಾರೆ.' ಅಂದರೆ ನಿಜವಾದ ಧರ್ಮನುಯಾಯಿ ಆದವನು ನಿರರ್ಥಕ ವಿಷಯಗಳತ್ತ ಗಮನ ನೀಡುವುದಿಲ್ಲ. ಜನಪಯೋಗಿ ಅಲ್ಲದ ನಿಷ್ಪçಯೋಜಕ ಕೆಲಸಕಾರ್ಯಗಳು ನಡೆಯುತ್ತಿರುವ ಸಂದರ್ಭಗಳಿಂದ ದೂರವಿದ್ದು, ಅವುಗಳಿಂದ ತಪ್ಪಿಸಿಕೊಳ್ಳುತ್ತಾನೆ. ಜನ ಪ್ರಯೋಜನಗಳತ್ತ ಗಮನ ಹರಿಸುತ್ತಾನೆ. ಕೊಳಕಾದ, ಅನುಪಯುಕ್ತವಾದ, ಅಸಂಬದ್ಧ, ಸುಳ್ಳು ಮಾತುಗಳನ್ನು ತಿರಸ್ಕರಿಸಿ. ಕುರಾನಿನ ವಾಕಿಯಾ ಅಧ್ಯಾಯದಲ್ಲಿ (೫೬-೨೫) `ದೇವಾರಾಧಕರು ಯಾವುದೇ ಅನಗತ್ಯ ಮಾತುಗಳಲ್ಲಿ, ಕೆಟ್ಟ ಸಂಭಾಷಣೆ - ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ' ಎಂದು ಹೇಳಲಾಗಿದೆ. ಮನುಷ್ಯನ ಎರಡು ಬಗೆಯ ಪ್ರಯತ್ನಗಳನ್ನು ತೋರಿಸಲಾಗಿದೆ. ಒಂದು ಯೋಗ್ಯವಾದದ್ದು, ಇನ್ನೊಂದು ಅಯೋಗ್ಯವಾದದ್ದು. ಯೋಗ್ಯವಾದ ಪ್ರಯತ್ನವು ಸಕಾರಾತ್ಮಕ ಪರಿಣಾಮಗಳನ್ನು ನೀಡಿದರೆ, ಅಯೋಗ್ಯ ಪ್ರಯತ್ನಗಳು ಯಾವ ಪರಿಣಾಮಗಳನ್ನೂ ನೀಡುವುದಿಲ್ಲ. ಅವು ನಿಷ್ಪçಯೋಜಕವಾಗಿರುವವು. ಧರ್ಮಾಚರಣೆಯುಳ್ಳ ಒಬ್ಬನ ಎದುರು ನಿಖರ ಗುರಿ ಇರುತ್ತದೆ. ಆ ಗುರಿಯನ್ನು ತಲುಪಲು ಆತನು ಉಪಯುಕ್ತ ವಿಧಾನಗಳನ್ನು ಅನುಸರಿಸಿ ಉಪಯುಕ್ತ ಪರಿಣಾಮಗಳನ್ನೇ ಪಡೆಯುತ್ತಾನೆ. ತನಗೆ ಜನರಿಗೆ ಉಪಯೋಗವಾಗುವ ಎಲ್ಲವನ್ನೂ ಪಡೆಯುತ್ತಾನೆ. ಇಂಥವನ ಕಾರ್ಯವನ್ನು ದೇವರು ಮೆಚ್ಚುತ್ತಾನೆ. ಜನೋಪಯೋಗಿ ಕೆಲಸಗಳೇ ದೇವರ ಸೇವೆಗೆ, ಆರಾಧನೆಗೆ ಯೋಗ್ಯ.
ಇಸ್ಲಾಮಿನ ಸಿದ್ಧಾಂತಗಳಲ್ಲಿ ಪ್ರಯೋಜನವಿಲ್ಲದ ನಾಲ್ಕು ನಿರುಪಯೋಗಿ ಕಾರ್ಯಗಳನ್ನು ವಿವರಿಸಿದೆ. ವ್ಯರ್ಥವಾದ ವೆಚ್ಚ, ಉಪಯೋಗಕ್ಕೆ ಬಾರದ ಜ್ಞಾನ, ನಿಷಿದ್ಧ ವ್ಯವಹಾರ ಹಾಗೂ ಲಗ್ವ ಅಂದರೆ ಅನುಚಿತ ನಿಷಿದ್ಧ ಪದಗಳ ಬಳಕೆ - ಇವೆಲ್ಲವೂ ಮನುಷ್ಯನಿಗೆ ಹಾಗೂ ಆತನ ಸುತ್ತಲಿರುವ ಸಮಾಜಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅವು ಕೆಡುಕನ್ನೇ ಉಂಟುಮಾಡುವವು. ನಾವಿರುವ ಭೂಮಿಯ ಮೇಲೆ ನಮ್ಮ ಇರವು ತೀರ ಸಂಕ್ಷಿಪ್ತವಾದದ್ದು. ನಮಗೆ ಸಿಕ್ಕ ಸಮಯವನ್ನು ನಮಗೆ ಬೇಕಾದ ಹಾಗೆ ವ್ಯಯ ಮಾಡುವ ಹಾಗಿಲ್ಲ. ನೀವು ವಿವೇಕವುಳ್ಳವರಾಗಿ ಉಪಯೋಗಿ ಕೆಲಸಗಳನ್ನೇ ಮಾಡಬೇಕು. ನಮಗೆ ಸಾಧ್ಯವಾದ ಹಾಗೂ ನಾವು ಗುರಿ ಮುಟ್ಟಲು ಸಾಧ್ಯವಾಗುವ ಕಾರ್ಯಗಳತ್ತ ಗಮನ ಹರಿಸಿ ಮಾಡುವ ಕೆಲಸ, ಆಡುವ ಮಾತುಗಳು ನಮಗೆ ಹಾಗೂ ಇತರರಿಗೆ ಉಪಯೋಗವಾಗಿರಬೇಕು ಎಂಬುದನ್ನು ಅನೇಕ ದಾರ್ಶನಿಕರು ಹೇಳುತ್ತಾರೆ.
ಉಪಯೋಗಕ್ಕೆ ಬಾರದ್ದು ಅಂದರೆ ಯಾವುದೇ ಪರಿಣಾಮ ಬೀರದೆ ಇರುವುದು ಎಂದರ್ಥ. ಪ್ರತಿಯೊಬ್ಬ ಸ್ತ್ರೀ-ಪುರುಷ ಬೇರೆಯವರೊಂದಿಗೆ ವ್ಯವಹರಿಸುವ ಮೊದಲು, ಇದು ಇಬ್ಬರಿಗೂ ಎಷ್ಟರ ಮಟ್ಟಿಗೆ ಪ್ರಯೋಜನವಾಗಬಹುದು ಎಂದು ಮುಂದಾಲೋಚನೆ ಮಾಡಬೇಕು. ನಾವು ಮಾಡುವ ಪ್ರತಿಯೊಂದು ಪ್ರಯತ್ನದಲ್ಲಿ ಜನ ಪ್ರಯೋಜಕ ಕೆಲಸಗಳು ಇದ್ದರೆ ಅವು ದೇವದತ್ತವಾಗುವವು.

Next Article