For the best experience, open
https://m.samyuktakarnataka.in
on your mobile browser.

ಜಪಾನ್‌: $55 ಮಿಲಿಯನ್ ಹೂಡಿಕೆಮಾಡಿ ಹುಬ್ಬಳ್ಳಿಯಲ್ಲಿ ನೂತನ ಘಟಕ ಆರಂಭ

01:39 PM Jun 28, 2024 IST | Samyukta Karnataka
ಜಪಾನ್‌   55 ಮಿಲಿಯನ್ ಹೂಡಿಕೆಮಾಡಿ ಹುಬ್ಬಳ್ಳಿಯಲ್ಲಿ ನೂತನ ಘಟಕ ಆರಂಭ

ಬೆಂಗಳೂರು: ಮುಂದಿನ ವರ್ಷ ಹುಬ್ಬಳ್ಳಿಯಲ್ಲಿ #Nidec ಕಂಪೆನಿಯ ನೂತನ ಘಟಕ ಆರಂಭ ಮಾಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಜಪಾನ್ ದೇಶದ #Nidec ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಕಂಪೆನಿಯ ಇತಿಹಾಸ, ಬೆಳವಣಿಗೆ, ಮತ್ತು ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಿದೆವು. ಮೋಟಾರ್‌ಗಳು, ಪವರ್ ಬ್ಯಾಕ್ಅಪ್ಗಳ ಜನರೇಟರ್‌ಗಳು, ಗೇರ್‌ ಬಾಕ್ಸ್‌ಗಳು, ಯಂತ್ರೋಪಕರಣಗಳು ಮತ್ತು R&D ಕಾರ್ಯಾಚರಣೆಗಳು ಸೇರಿದಂತೆ ವಿವಿಧ ವ್ಯಾಪಾರ ವಿಭಾಗಗಳ ಸಂಬಂಧ ರಾಜ್ಯದಲ್ಲಿ ವಿಸ್ತರಣೆಗಿರುವ ವಿಪುಲ ಅವಕಾಶಗಳ ಕುರಿತು ತಿಳಿಸಿಕೊಟ್ಟು ಅಗತ್ಯದ ಎಲ್ಲ ನೆರವುಗಳನ್ನು ನೀಡುವ ಭರವಸೆ ನೀಡಿದೆವು. Nidec ಕಂಪೆನಿಯು $55 ಮಿಲಿಯನ್ ಹೂಡಿಕೆಮಾಡಿ 2025ರ ವೇಳೆಗೆ ಹುಬ್ಬಳ್ಳಿಯಲ್ಲಿ ತನ್ನ ಘಟಕ ಆರಂಭಿಸಲಿದೆ. ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ (EV) ವಿದ್ಯುತ್ ವಾಹನಗಳನ್ನು ತಯಾರಿಸುವ 6 ಕಾರ್ಖಾನೆಗಳನ್ನು ಆರಂಭಿಸುವ ಗುರಿಯನ್ನು ಕಂಪೆನಿ ಹೊಂದಿದೆ ಎಂದಿದ್ದಾರೆ.