ಜಯಾ ಬಚ್ಚನ್ vs ಜಗದೀಪ್ ಧನಕರ್ ನಡುವೆ ಮತ್ತೊಮ್ಮೆ ವಾಗ್ವಾದ
ನಾವು ಸಹೋದ್ಯೋಗಿಗಳು ಸರ್. ನೀವು ಕುರ್ಚಿಯ ಮೇಲೆ ಕುಳಿತಿರಬಹುದು, ಆದರೆ ಪಾಠ ಮಾಡಲು ನಾವು ಮಕ್ಕಳಲ್ಲ. ಇದು ಶಾಲೆಯಲ್ಲ
ನವದೆಹಲಿ: ಜಯಾ ಬಚ್ಚನ್ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರ ನಡುವಿನ ಮಾತುಗಳು ಮತ್ತೊಮ್ಮೆ ವಾಗ್ವಾದ ಸೃಷ್ಟಿಮಾಡಿದೆ.
ರಾಜ್ಯಸಭೆ ಕಲಾಪದ ವೇಳೆ ಇಂದು ಸಹ ಜಯಾ ಬಚ್ಚನ್ ಹಾಗೂ ಜಗದೀಪ್ ಧನಕರ್ ನಡುವೆ ಮತ್ತೊಮ್ಮೆ ಜಟಾಪಟಿ ನಡೆದಿದೆ. ಮಾತಿಗೆ ಮಾತು ಬೆಳೆದು ಕೊನೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರು ಸಭಾತ್ಯಾಗ ಮಾಡಿದ ಘಟನೆ ನಡೆಯಿತು. ಕಲಾಪದ ವೇಳೆ ಸಭಾಧ್ಯಕ್ಷರಾದ ಧನ್‌ಕರ್ ಅವರು ಗೌರವಾನ್ವಿತ್ ಜಯಾ ಅಮಿತಾಬ್ ಬಚ್ಚನ್ ಇದೀಗ ಮಾತನಾಡಲಿದ್ದಾರೆ. ಮ್ಯಾಡಮ್ ಪ್ರಾರಂಭಿಸಿ ಎಂದು ಧನ್‌ಕರ್ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಜಯಾ, “ನಾನು ಜಯಾ ಅಮಿತಾಬ್ ಬಚ್ಚನ್ ಮಾತನಾಡುತ್ತಿದ್ದೇನೆ. ನಾನು ಒಬ್ಬ ಕಲಾವಿದೆ. ಒಬ್ಬ ವ್ಯಕ್ತಿಯ ವರ್ತನೆ, ಭಾವನೆ ನನಗೆ ಅರ್ಥವಾಗುತ್ತದೆ. ಕ್ಷಮಿಸಿ ನಿಮ್ಮ ಮಾತಿನ ಧಾಟಿ ಸರಿಯಿಲ್ಲ, ನಾವು ಸಹೋದ್ಯೋಗಿಗಳು ಸರ್. ನೀವು ಕುರ್ಚಿಯ ಮೇಲೆ ಕುಳಿತಿರಬಹುದು, ಆದರೆ ಪಾಠ ಮಾಡಲು ನಾವು ಮಕ್ಕಳಲ್ಲ. ಇದು ಶಾಲೆಯಲ್ಲ ಎಂದು ಆಕ್ರೋಶವಾಗಿ ಹೇಳಿದರು. ಈ ಮಾತುಗಳ ಮಾತಾನಡಿದ ಧನಕರ್ ಅವರು ಜಯಾ ಜೀ, ನೀವು ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ್ದೀರಿ. ನಿಮಗೆ ಗೊತ್ತಾ, ಒಬ್ಬ ನಟ ನಿರ್ದೇಶಕನಿಗೆ ಒಳಪಟ್ಟಿರುತ್ತಾನೆ. ಪ್ರತಿದಿನ ನಾನು ಹೇಳಲು ಬಯಸುವುದಿಲ್ಲ. ನನಗೆ ಪಾಠ ಮಾಡಲು ಇಷ್ಟವಿಲ್ಲ. ನೀವು ನನ್ನ ಮಾತಿನ ಧಾಟಿ ಬಗ್ಗೆ ಮಾತನಾಡುತ್ತಿದ್ದೀರಾ? ನೀವು ಪ್ರಸಿದ್ಧರಾಗಿರಬಹುದು, ನೀವು ಮಾತ್ರ ಸದನಕ್ಕೆ ಖ್ಯಾತಿಯನ್ನು ತರುತ್ತೀರಿ ಎಂದು ನೀವು ಭಾವಿಸುತ್ತೀರಾ? ನೀವು ಯಾರಾದರೂ ಆಗಿರಬಹುದು, ನೀವು ಸೆಲೆಬ್ರಿಟಿಯಾಗಿರಬಹುದು ಆದರೆ ಆದರೆ ಸಭಾ ಮರ್ಯಾದೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ನಾವು ಶಾಲಾ ಮಕ್ಕಳಲ್ಲ ಸದನದ ಹೊರಗೂ ಜಯಾ ಕಿಡಿ: ರಾಜ್ಯಸಭೆಯಿಂದ ಹೊರನಡೆದ ನಂತರ ಜಯಾ ಬಚ್ಚನ್ ರಾಜ್ಯಸಭಾ ಅಧ್ಯಕ್ಷರನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಚ್ಚನ್, ಸಭಾಪತಿಯವರು ಬಳಸಿದ ಸ್ವರವನ್ನು ನಾನು ಆಕ್ಷೇಪಿಸಿದೆ. ನಾವು ಶಾಲಾ ಮಕ್ಕಳಲ್ಲ. ನಮ್ಮಲ್ಲಿ ಕೆಲವರು ಹಿರಿಯ ನಾಗರಿಕರು. ನಾನು ಧ್ವನಿಯಿಂದ ಅಸಮಾಧಾನಗೊಂಡಿದ್ದೇನೆ ಮತ್ತು ವಿಶೇಷವಾಗಿ ವಿರೋಧ ಪಕ್ಷದ ನಾಯಕರು ಮಾತನಾಡಲು ಎದ್ದು ನಿಂತಾಗ, ಅವರು ಮೈಕ್ ಅನ್ನು ಸ್ವಿಚ್ ಆಫ್ ಮಾಡಿದರು. ಅವರು ಇದನ್ನು ಮಾಡುವುದು ಸರಿಯೇ? ನೀವು ಇದನ್ನು ಹೇಗೆ ಮಾಡಬಹುದು? ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ನೀವು ಅವಕಾಶ ನೀಡಬೇಕು… ‘ಬುದ್ಧಿಹೀನ್’ ಎಂದು ನೀವು ಉಪದ್ರವ ಮಾಡುತ್ತಿದ್ದೀರಿ, ಎಂದರು