For the best experience, open
https://m.samyuktakarnataka.in
on your mobile browser.

ಜಾತಿ ಸಮೀಕ್ಷೆಗೆ ಮತ್ತೆ ಜೀವ

02:07 AM Jan 25, 2024 IST | Samyukta Karnataka
ಜಾತಿ ಸಮೀಕ್ಷೆಗೆ ಮತ್ತೆ ಜೀವ

ಪಟನಾ: ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಿರುವ ಕರ್ಪೂರಿ ಠಾಕೂರ್ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂದರೆ ದೇಶಾದ್ಯಂತ ಜಾತಿ ಸಮೀಕ್ಷೆ ನಡೆಸಿ, ಕರ್ಪೂರಿ ಸೂತ್ರ ಅನುಸರಿಸಬೇಕು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಕರ್ಪೂರಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಮದ್ಯ ನಿಷೇಧವನ್ನು ಜಾರಿಗೆ ತಂದಿದ್ದರು. ಚುನಾವಣೆ ಕೇವಲ ಮೂರು ತಿಂಗಳು ಇರುವಾಗ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಬಿಜೆಪಿ ಲಾಭ ಪಡೆದುಕೊಳ್ಳಲು ನೋಡುತ್ತಿದೆ ಎಂದು ಟೀಕಿಸಿದರು.
ಬಡ, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದವರವರನ್ನು ಮೇಲೆತ್ತಬೇಕೆಂಬುದೇ ಕರ್ಪೂರಿ ಠಾಕೂರ್ ಅವರ ಧ್ಯೇಯವಾಗಿತ್ತು. ರಾಜ್ಯದ ಅತ್ಯಂತ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದನ್ನು ಆರಂಭಿಸಿದವರೇ ಕರ್ಪೂರಿ ಠಾಕೂರ್. ತಮ್ಮ ಸರ್ಕಾರದಲ್ಲಿಯೂ ಅದನ್ನು ಮುಂದುವರಿಸಲಾಗಿದೆ ಎಂದಿದ್ದಾರೆ. ಕರ್ಪೂರಿ ಅವರು ಎಂದೂ ತಮ್ಮ ಕುಟುಂಬದವರನ್ನು ಮುಂದಕ್ಕೆ ತರಲು ಯತ್ನಿಸಿಲ್ಲ. ಅವರ ದಾರಿಯಲ್ಲಿಯೇ ತಾವೂ ಸಾಗಲು ತೀರ್ಮಾನಿಸಿರುವುದಾಗಿ ಹೇಳಿದರು.
ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವವನ್ನು ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಪ್ರತ್ಯೇಕವಾಗಿ ಆಚರಿಸಿವೆ. ಕಾಂಗ್ರೆಸ್ ಪಕ್ಷವೂ ಕೇಂದ್ರದ ತೀರ್ಮಾನವನ್ನು ಸ್ವಾಗತಿಸಿದೆ.
ಜೆಡಿಯು ಹಾಗೂ ಆರ್‌ಜೆಡಿ ರ‍್ಯಾಲಿಯಂತೆ ಬಿಜೆಪಿ ಕೂಡ ಮೆರವಣಿಗೆ ನಡೆಸಿತು. ರ‍್ಯಾಲಿ ನಡೆಸುವುದರಲ್ಲೂ ಪೈಪೋಟಿ ಇತ್ತು. ಬಿಹಾರದ ಪ್ರತಿಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಇಂದಿನ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಈಗಿನ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.