ಜಾತ್ರೆಗೆ ಬಂದಿದ್ದ ಬಾಲಕರು ನೀರಲ್ಲಿ ಮುಳುಗಿ ಸಾವು
10:19 PM Jan 22, 2025 IST | Samyukta Karnataka
ಬೆಳಗಾವಿ: ಸವದತ್ತಿಯ ಪ್ರಸಿದ್ಧ ಸವದತ್ತಿ ಯಲ್ಲಮ್ಮ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಮುನವಳ್ಳಿ ನವಿಲು ತೀರ್ಥ ಡ್ಯಾಮ್ ಬಳಿ ಮಲಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ವೀರೇಶ್ ಕಟ್ಟಿಮನಿ(13) ಮತ್ತು ಸಚಿನ್ ಕಟ್ಟಿಮನಿ(14) ಮೃತಪಟ್ಟಿದ್ದಾರೆ. ಜಾತ್ರೆ ಮುಗಿದ ನಂತರ ಸ್ನಾನಕ್ಕೆ ಡ್ಯಾಮಿಗೆ ಇಳಿದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಒಬ್ಬನ ಶವ ಹೊರತೆಗೆಯಲಾಗಿದ್ದು ಇನ್ನೊಬ್ಬನಿಗೆ ಶೋಧ ಕಾರ್ಯ ಮುಂದುವರಿದಿದೆ. ಸವದತ್ತಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.