ಜಿಎಸ್‌ಟಿ ಜಾರಿಯಿಂದ ಅನೇಕ ರಾಜ್ಯಗಳು ದಿವಾಳಿಯಾಗುವುದು ತಪ್ಪಿದೆ
ಹಾವೇರಿ(ರಾಣೆಬೆನ್ನೂರು): ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಅನೇಕ ರಾಜ್ಯಗಳು ದಿವಾಳಿಯಾಗುವುದು ತಪ್ಪಿದೆ. ಕೇಂದ್ರ ಸರ್ಕಾರ ಐದು ವರ್ಷ ಶೇ 14% ರಷ್ಟು ಪರಿಹಾರ ನೀಡಿದೆ. ಯಾವ ರಾಜ್ಯವೂ ಶೇ 14 ರಷ್ಡು ಜಿಎಸ್‌ಟಿ ಸಂಗ್ರಹ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ರಾಣೆಬೆನ್ನೂರಿನಲ್ಲಿ ಎಂಜಿಯರ್ಸ್ ಅಸೊಸಿಯೇಷನ್, ಅಗ್ರಿಕಲ್ಚರ್ ಗ್ರಾಜುಯೇಟ್ಸ್ ಅಸೋಷಿಯೇಷನ್, ಟ್ಯಾಕ್ಸ್ ಪೇಯರ್ಸ್ ಅಸೋಷಿಯೇಷನ್ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಜಿಎಸ್‌ಟಿ ಸಂಗ್ರಹ ಶೇ 11ರಷ್ಟು ಮಾತ್ರ ಇದೆ. ಸುಮ್ಮನೇ ಜಿಎಸ್‌ಟಿ ವ್ಯವಸ್ಥೆಯ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
ಬೇರೆ ಬೇರೆ ವೃತ್ತಿಯ ಸಂಘಗಳವರು ಎಲ್ಲರೂ ಒಂದೆಡೆ ಸಭೆ ಸೇರಿರುವುದು ಒಳ್ಳೆಯ ವಿಷಯ. ಮನುಷ್ಯ ಸಂಘ ಜೀವಿ, ಸಮಾಜ ಜೀವಿ, ಒಬ್ಬನೇ ಬದುಕುವುದು ಕಷ್ಟ. ಒಬ್ಬರಿಗೊಬ್ಬರು ಸಹಕಾರ ನೀಡಬೆಕು. ಒಬ್ಬರಿಂದ ಯಾವುದೇ ಕೆಲಸ ಆಗುವುದಿಲ್ಲ. ಚೈನಾದಲ್ಲಿ ನಿರಂಕುಶ ಪ್ರಭುತ್ವ ಇದೆ. ಆದರೂ ಅಲ್ಲಿ ಅಲ್ಲಿಯೇ ಅವರು ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ. ಎಂದರು.
ತೆರಿಗೆ ಸರಿಯಾದ ಕಾರಣಕ್ಕೆ ಹಾಕಬೇಕು. ಅದು ಇಕ್ವಿಟೆಬಲ್, ಅಕೌಂಟೇಬಲ್ ಆಗಿರಬೇಕು. ತೆರಿಗೆ ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದರು.
ಹಸಿರು ಕ್ರಾಂತಿಯಾಗಲು ಬೀಜ ಅಭಿವೃದ್ದಿ ಮುಖ್ಯ, ಸೀಡ್ ಡೆವೆಲಪಮೆಂಟ್ ಮಾಡಿ ಕೃಷಿಯಲ್ಲಿ ಪ್ರಯೋಗ ಮಾಡಿದಾಗ ಯಶಸ್ವಿಯಾಗಿದೆ. ಕೃಷಿಯಲ್ಲಿ ಶೇ 1ರಷ್ಟು ಅಭಿವೃದ್ದಿಯಾದರೆ ಉತ್ಪಾದನಾ ವಲಯದಲ್ಲಿ ಶೇ 4ರಷ್ಟು ಉತ್ಪಾದನೆ ಆಗುತ್ತದೆ. ಅದರಿಂದ ಸೇವಾ ವಲಯದಲ್ಲಿ ಶೇ 10 ಅಭಿವೃದ್ಧಿಯಾಗುತ್ತದೆ ಎಂದರು.
ನಮ್ಮ ದೇಶದಲ್ಲಿ ಎಂಜನೀಯರ್ಸ್‌ಗಳಿಗೆ ಅವಕಾಶ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ಎಂಜನೀಯರ್‌ಗಳ ಪ್ರಮಾಣ ಪತ್ರ ಇಲ್ಲದೇ ಯಾವುದೇ ಕೆಲಸ ಮಾಡಬಾರದು ಎಂಬ ಕಾನೂನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.