ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜೂ. ಏಷ್ಯಾಕಪ್ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡ

01:45 PM Dec 05, 2024 IST | Samyukta Karnataka

ಮಸ್ಕತ್: ಓಮನ್‌ನಲ್ಲಿ ನಡೆದ ಪುರುಷರ ಜೂನಿಯರ್ ಏಷ್ಯಾಕಪ್ ಫೈನಲ್‌ನಲ್ಲಿ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ೫-೩ ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬುಧವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಪಂದ್ಯದ ಆರಂಭದಲ್ಲೇ ಪಾಕಿಸ್ತಾನ ಗೋಲು ಗಳಿಸುವ ಮೂಲಕ ೧-೦ ಮುನ್ನಡೆ ಸಾಧಿಸಿತ್ತು. ಆದರೆ ನಾಲ್ಕನೇ ನಿಮಿಷದಲ್ಲಿ ಭಾರತದ ಪರ ಅರ್ಜಿತ್ ಸಿಂಗ್ ಹುಂಡಾಲ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು. ಪಂದ್ಯದ ಮೊದಲ ಅವಧಿಯಲ್ಲಿ ಎರಡೂ ತಂಡಗಳು ೧-೧ರಿಂದ ಸಮಬಲ ಸಾಧಿಸಿದವು. ಪಂದ್ಯದ ಅರ್ಧ ಅವಧಿಗೆ ೩-೨ರಿಂದ ಭಾರತ ಮುನ್ನಡೆ ಸಾಧಿಸಿತ್ತು. ಮೂರನೇ ಅವಧಿಯಲ್ಲಿ ಪಾಕ್ ಮತ್ತೇ ಗೋಲು ಗಳಸಿದ್ದರಿಂದ ಪಂದ್ಯ ೩-೩ರಿಂದ ರೋಚಕತೆಯತ್ತ ಸಾಗಿತು. ಆದರೆ ಅಂತಿಮ ಹಂತದಲ್ಲಿ ಭಾರತದ ಆಟಗಾರರ ಅದ್ಭುತ ಆಟದಿಂದ ಪಂದ್ಯವನ್ನು ೫-೩ ರಿಂದ ಗೆದ್ದುಕೊಂಡಿತು. ಭಾರತದ ಗೆಲುವಿನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಅರ್ಜಿತ್ ಸಿಂಗ್ ಹುಂಡಾಲ್ ನಾಲ್ಕು ಗೋಲು ಬಾರಿಸಿದರೆ, ದಿಲ್‌ರಾಜ್ ಒಂದು ಗೋಲು ಗಳಿಸಿದರು.

Tags :
#ಕ್ರೀಡೆ
Next Article