ಜೈಲಾಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು: ದರ್ಶನ್ ವಕೀಲ
ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್‌ರನ್ನು ವಕೀಲ ಸುನೀಲ್ ಮಂಗಳವಾರ ಭೇಟಿ ಮಾಡಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಹೊಸ ಮ್ಯಾನುವಲ್ ಪ್ರಕಾರ ಸೌಲಭ್ಯ ನೀಡಲು ಜೈಲಾಧಿಕಾರಿಗೆ ಮನವಿ ಮಾಡಲಾಗಿದೆ. ಎರಡು ದಿನದಲ್ಲಿ ಮೂಲ ಸೌಲಭ್ಯ ನೀಡದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತೇವೆ. ಹೊಸ ಮ್ಯಾನುವಲ್ ಪ್ರಕಾರ ಮೆಡಿಕಲ್ ಬೆಡ್ ಮತ್ತು ದಿಂಬು ಕೊಡಲು ಅವಕಾಶ ಇದೆ. ನ್ಯಾಯಾಲಯದಿಂದ ಬಂದಿರುವ ಆದೇಶದ ಬಗ್ಗೆ ಜೈಲ್ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಸೌಲಭ್ಯ ನೀಡದೇ ಇದ್ದರೇ ದೂರು ಕೊಡುತ್ತೇವೆ ಎಂದ ಅವರು, ಸೆಷನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಸೆ. 27ರಂದು ವಿಚಾರಣೆ ಇದೆ. ಶನಿವಾರ ಜಾಮೀನು ಅರ್ಜಿ ಹಾಕಿದ್ದು, ಪಬ್ಲಿಕ್ ಪ್ರಾಸಿಕ್ಯೂಷನ್ ಟೈಮ್ ತೆಗೆದುಕೊಂಡಿದ್ದಾರೆ. ಬೇಲ್ ಅರ್ಜಿ ರಿಜೆಕ್ಟ್ ಆದ್ರೆ ಹೈಕೋರ್ಟ್‌ಗೆ ಹೋಗ್ತೇವೆ. ನಮಗೆ ನೂರಕ್ಕೆ ನೂರು ಜಾಮೀನು ಸಿಗುತ್ತೆ ಎನ್ನುವ ವಿಶ್ವಾಸ ಇದೆ. ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ.
ನಮಗೆ ಕೆಲವೊಂದು ಡೌಟ್ಸ್ ಇತ್ತು, ಎಲ್ಲಾ ಕ್ಲಾರಿಫಿಕೇಷನ್ ತಗೊಂಡಿದ್ದೇವೆ ಎಂದರು. ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿದೆ. ಹೀಗಾಗಿ ಮೆಡಿಕಲ್ ಅವಕಾಶಗಳನ್ನ ಕನ್ಸಿಡರ್ ಮಾಡೋದಕ್ಕೆ ಜೈಲು ಅಧಿಕಾರಿಗಳಿಗೆ ಹೇಳಿದ್ದೇವೆ. ಬೇಸಿಕ್ ಮೂಲಭೂತ ಸೌಲಭ್ಯ ಕೊಡಿ ಅಂತಾ ಹೇಳಿದ್ದೇವೆ. ಹೊಸ ಮ್ಯಾನುವಲ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. 2021ರ ಮ್ಯಾನುವಲ್ ಪ್ರಕಾರ ಖೈದಿಗೆ ಮೂಲಭೂತ ಸೌಲಭ್ಯಗಳನ್ನ ಕೊಡಬೇಕಾಗ್ತದೆ. ಮೀಡಿಯಾದಲ್ಲಿ ಬರುತ್ತೆ ಎಂದು ಸೌಲಭ್ಯ ತಿರಸ್ಕಾರ ಮಾಡುವಂತಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡೋದಾಗಿ ಜೈಲು ಅಧಿಕಾರಿ ಹೇಳಿದ್ದಾರೆ ಎಂದರು.