For the best experience, open
https://m.samyuktakarnataka.in
on your mobile browser.

ಝೇಂಕಾರ ಬ್ರಾಂಡ್ ಜೇನು ತುಪ್ಪ: ಅರ್ಜಿ ಆಹ್ವಾನ

07:02 AM Dec 20, 2024 IST | Samyukta Karnataka
ಝೇಂಕಾರ ಬ್ರಾಂಡ್ ಜೇನು ತುಪ್ಪ  ಅರ್ಜಿ ಆಹ್ವಾನ

ಧಾರವಾಡ : ತೋಟಗಾರಿಕೆ ಇಲಾಖೆ ಮಾಲೀಕತ್ವದ ಜೇನು ತುಪ್ಪದ ಬ್ರಾಂಡ್ ಹೆಸರಾದ ಝೇಂಕಾರ ಬ್ರಾಂಡ್ ಹೆಸರಿನಲ್ಲಿ ಜೇನು ತುಪ್ಪವನ್ನು ಮಾರಾಟ ಮಾಡಲು ಇಚ್ಛಿಸುವ ಜೇನು ತುಪ್ಪದ ಉತ್ಪಾದಕರು, ಸಂಗ್ರಹಣಾಕರರು ಝೇಂಕಾರ ಬ್ರಾಂಡ್ ಹೆಸರನ್ನು ಬಳಸಲು ತೋಟಗಾರಿಕೆ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ಒಡಂಬಡಿಕೆ ಮಾಡಿಕೊಂಡು ಅನುಮತಿ ಪಡೆಯಲು ಅವಕಾಶವಿರುತ್ತದೆ.

ಬ್ರಾಂಡ್ ಹೆಸರು, ಟ್ಯಾಗ್ ಲೈನ್, ಲೋಗೋ ಮತ್ತು ಪ್ಯಾಕೇಜಿಂಗ್ ಡಿಜೈನ್ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಆಸಕ್ತ ಉತ್ಪಾದಕರು, ಸಂಗ್ರಹಣಾಕರರು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Tags :