ಟರ್ಕಿ ರೆಸಾರ್ಟ್‌ನಲ್ಲಿ ಬೆಂಕಿ: ೬೬ ಜನರ ಸಾವು
ಅಂಕರಾ: ಟರ್ಕಿಯ ರೆಸಾರ್ಟ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಕನಿಷ್ಠ ೬೬ ಜನರು ಸಜೀವವಾಗಿ ದಹನಗೊಂಡಿದ್ದಾರೆ. ಅಲ್ಲದೆ ಇನ್ನೂ ೫೧ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿದ್ದಾರೆ.
ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್ ಹೋಟೆಲ್‌ನಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ವ್ಯಾಪಿಸಿ ಸಾವು-ನೋವು ಮತತು ನಾಶನಷ್ಟಕ್ಕೆ ಕಾರಣವಾಗಿದೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳೀಯ ಸಮಯ ಬೆಳಗಿನ ಜಾವ ೩:೨೭ಕ್ಕೆ ಕಾರ್ತಲ್ಕಾಯಾದ ಪರ್ವತದ ತುದಿಯ ರೆಸಾರ್ಟ್ನಲ್ಲಿರುವ ೧೨ ಅಂತಸ್ತಿನ ಗ್ರ‍್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ. ಕಟ್ಟಡದಿಂದ ಹಾರಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಮಾಧ್ಯಮಗಳು ಸಹ ಅತಿಥಿಗಳು ಹಾಸಿಗೆ ಮತ್ತು ಕಂಬಳಿಗಳನ್ನು ಬಳಸಿ ತಮ್ಮ ಕೋಣೆಗಳಿಂದ ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ಮಾಡಿದೆ.
ಹೋಟೆಲ್ ಶೇಕಡ ೮೦-೯೦ರಷ್ಟು ಪ್ರವಾಸಿಗರಿಂದ ತುಂಬಿತ್ತು. ೨೩೦ಕ್ಕೂ ಹೆಚ್ಚು ಅತಿಥಿಗಳು ಚೆಕ್ ಇನ್ ಆಗಿದ್ದರು. ಹೋಟೆಲ್‌ನಲ್ಲಿ ಸ್ಕೀ ಸಿಬ್ಬಂದಿ ನೆಕ್ಮಿ ಕೆಪ್ಸೆಟ್ಟುಟನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.