ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಟಾಕ್ಸಿಕ್‌ಪಾಂಡಾ: ಮೊಬೈಲ್‌ ಬಳಕೆದಾರರೇ ಎಚ್ಚರ!

11:19 AM Nov 08, 2024 IST | Samyukta Karnataka

ಟಾಕ್ಸಿಕ್‌ಪಾಂಡಾ ಎಂದು ಹೆಸರಿಸಲಾದ ಮಾಲ್‌ವೇರ್ ಬಗ್ಗೆ ಸೈಬರ್ ಭದ್ರತಾ ಸಂಶೋಧಕರು ಎಚ್ಚರಿಸಿದ್ದಾರೆ

ನವದೆಹಲಿ: ToxicPanda ಹೆಸರಿನ ಹೊಸ ಮಾಲ್‌ವೇರ್ ಕುರಿತಂತೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಳಕೆದಾರರ ಮೇಲೆ ಅಲರ್ಟ್ ಘೋಷಿಸಲಾಗಿದೆ.
ಆಂಡ್ರಾಯ್ಡ್ ಬಳಕೆದಾರರಿಗೆ ಅವರ ಬ್ಯಾಂಕ್ ಖಾತೆಗಳನ್ನು ಗುರಿಯಾಗಿಸುವ ಮೂಲಕ ಗಮನಾರ್ಹ ಅಪಾಯವನ್ನುಂಟುಮಾಡುತ್ತಿದೆ. ವಿಶ್ವಾಸಾರ್ಹ ಅಪ್ಲಿಕೇಶನ್‌ಗಳಂತೆ ವೇಷ ಧರಿಸಿರುವ ಈ ಟ್ರೋಜನ್ ಜಾಗತಿಕವಾಗಿ ಹರಡುತ್ತಿದ್ದು, ಆನ್‌ಲೈನ್‌ನಲ್ಲಿ ಸರ್ಫಿಂಗ್ ಮಾಡುವಾಗ ಬಳಕೆದಾರರು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಈ ಮಾಲ್ವೇರ್ ಬ್ಯಾಂಕಿಂಗ್ ಅಪ್ಲಿಕೇಶನ್ ಮತ್ತು ಗೂಗಲ್ ಕ್ರೋಮ್ ರೂಪದಲ್ಲಿ ನಿಮ್ಮ ಸ್ಮಾರ್ಟ್​ಫೋನ್​ಗೆ ಪ್ರವೇಶಿಸುತ್ತದೆ. ಸೈಬರ್ ಭದ್ರತಾ ಸಂಸ್ಥೆಯ ಕ್ಲೀಫಿ ಥ್ರೆಟ್ ಇಂಟೆಲಿಜೆನ್ಸ್ ತಂಡವು ಈ ಮಾಲ್ವೇರ್ ಅನ್ನು ಪತ್ತೆಹಚ್ಚಿದೆ. ಈ ಮಾಲ್ವೇರ್ ಬ್ಯಾಂಕಿಂಗ್ ಭದ್ರತೆಯನ್ನು ಬೈಪಾಸ್ ಮಾಡುತ್ತದೆ ನಂತರ ಬಳಕೆದಾರರ ಬ್ಯಾಂಕ್ ಖಾತೆಯಿಂದ ಹಣವನ್ನು ವಶಪಡಿಸಿಕೊಳ್ಳುತ್ತದೆ. ಈ ಮಾಲ್‌ವೇರ್ ಹೆಚ್ಚು ಅಪಾಯಕಾರಿ ಆಗಿದೆ ಎಂದು ಹೇಳಲಾಗಿದೆ. ಏಕೆಂದರೆ ಈ ಮಾಲ್‌ವೇರ್ ಮೂಲಕ ರಿಮೋಟ್ ಹ್ಯಾಕರ್‌ಗಳು ನಿಮ್ಮ ಸಾಧನವನ್ನು ಎಲ್ಲಿಂದಲಾದರೂ ನಿಯಂತ್ರಿಸಬಹುದು. ಈ ಅಪಾಯಕಾರಿ ಪಾಂಡ ಮಾಲ್‌ವೇರ್ ಅನ್ನು ಗುರುತಿಸುವುದು ಕಷ್ಟ ಏಕೆಂದರೆ ಅದು ಥೇಟ್ ಜನಪ್ರಿಯ ಅಪ್ಲಿಕೇಶನ್‌ಗಳಂತೆ ಕಾಣುತ್ತದೆ.

Tags :
#attack#Cyberattack#cybersecurity#informationsecurity#malware#ToxicPanda
Next Article