For the best experience, open
https://m.samyuktakarnataka.in
on your mobile browser.

ಟ್ರ್ಯಾಕ್ಟರ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವು

05:43 PM Jan 21, 2025 IST | Samyukta Karnataka
ಟ್ರ್ಯಾಕ್ಟರ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ಬೆಳಗಾವಿ: ಪರೀಕ್ಷೆ ಬರೆದು ಮನೆಗೆ ಮರಳಲು ಟ್ರ್ಯಾಕ್ಟರ್ ಏರುತ್ತಿದ್ದ ವಿದ್ಯಾರ್ಥಿನಿಯೋರ್ವಳು ಆಯತಪ್ಪಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ರಾಷ್ಟ್ರೀಯ ದಾದಬಾನಹಟ್ಟಿ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಶೃತಿಕಾ ಈರಪ್ಪ ರುದ್ರಾಪುರಿ(೧೭) ಎಂಬುವಳೇ ಮೃತ ವಿದ್ಯಾರ್ಥಿನಿ. ಶಿವಾಪುರದಿಂದ ಯಮಕನಮರಡಿ ಸರಕಾರಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಪರೀಕ್ಷೆ ಬರೆಯಲು ಆಗಮಿಸಿದ್ದ ಶೃತಿಕಾ ಪರೀಕ್ಷೆ ಮುಗಿಸಿದ ನಂತರ ದಾದಬಾನಹಟ್ಟಿ ಸರ್ಕಲ್ ಬಳಿ ತಮ್ಮೂರಿಗೆ ಮರಳಲು ಇತರ ವಿದ್ಯಾರ್ಥಿನಿಯರೊಂದಿಗೆ ಕಾಯುತ್ತ ನಿಂತಿದ್ದರು. ಅದೇ ವೇಳೆ ಹತ್ತರಗಿ ಕಡೆಯಿಂದ ಶಿವಾಪುರ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್ ಆಗಮಿಸಿದ್ದು, ಟ್ಯಾಕ್ಟರ್‌ನಲ್ಲಿ ಮೊದಲು ಓರ್ವ ವಿದ್ಯಾರ್ಥಿನಿ ಹತ್ತಿದ ಬಳಿಕ ಶೃತಿಕಾ ಟ್ರ್ಯಾಕ್ಟರ್ ಏರಲು ಹೋದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಅಷ್ಟರಲ್ಲಿ ಚಾಲಕ ಟ್ರ್ಯಾಕ್ಟರ್ ಮುಂದೆ ಚಲಾಯಿಸಿದ್ದರಿಂದ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಯಮಕನಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.