For the best experience, open
https://m.samyuktakarnataka.in
on your mobile browser.

ಡಾ.ಎಂ.ಎಂ ಜೋಶಿ ಮೌಲ್ಯಾಧಾರಿತ ಸೇವೆ ಅನನ್ಯ: ಉಪರಾಷ್ಡ್ರಪತಿ

07:54 PM Mar 01, 2024 IST | Samyukta Karnataka
ಡಾ ಎಂ ಎಂ ಜೋಶಿ ಮೌಲ್ಯಾಧಾರಿತ ಸೇವೆ ಅನನ್ಯ  ಉಪರಾಷ್ಡ್ರಪತಿ

ಹುಬ್ಬಳ್ಳಿ : ಡಾ.ಎಂ.ಎಂ ಜೋಶಿಯವರು ಮಾನವೀಯ ಅಂತಃಕರಣದಿಂದ ಬಡವರಿಗೆ ನೇತ್ರ ಚಿಕಿತ್ಸೆ ಕಲ್ಪಿಸುವ ಹಲವು ದಶಕಗಳ ಸೇವೆ ಅನನ್ಯ. ಮೌಲ್ಯಧಾರಿತ ಸೇವೆ ಮಾದರಿಯಾದುದು ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ನುಡಿದರು.

ಡಾ.ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನೂತನ ಕಟ್ಟಡ ಐಸಿರಿ ಉದ್ಘಾಟಿಸಿ ಮಾತನಾಡಿದರು.

ಹಲವಾರು ದಶಕಗಳ ಹಿಂದೆಯೇ ನೇತ್ರ ತಜ್ಞರಾದರೂ ಹೃದಯದಿಂದ ಬಡವರಿಗೆ, ಆಗಿನ ಕಾಲದಲ್ಲಿ ಸೌಕರ್ಯಗಳಿಲ್ಲದೇ ಸಂದರ್ಭದಲ್ಲಿ ನೇತ್ರ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ನೇರವೇರಿಸಿದ್ದು ಅಸಾಮಾನ್ಯ ಸಾಧನೆ. ಇಂತಹ ಅಪರೂಪದ ಸಾಧಕರ ದರ್ಶನ ಮಾಡಿದ್ದೇ ನಮ್ಮ ಭಾಗ್ಯ ಎಂದರು.

ಇದೇ ರೀತಿ ಅವರ ಸಂಸ್ಥೆಯ ಉತ್ಕೃಷ್ಟ ಸೇವೆ, ಜನಪರ ಕಾಳಜಿ ಮುಂದುವರಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಆರೋಗ್ಯ, ಶಿಕ್ಷಣ ಕ್ಷೇತ್ರ ಸೇವಾ ಕ್ಷೇತ್ರಗಳು. ಈ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅಗಾಧ ರೀತಿ ಅನುದಾನ ದೊರಕಿಸಿ ಸ್ಪಂದನೀಯ ಕಾರ್ಯ ಮಾಡುತ್ತಿದೆ ಎಂದ ಉಪರಾಷ್ಟ್ರಪತಿ, ಆಯುಷ್ಮಾನ್ ಭಾರತ ಯೋಜನೆ ವಿಶೇಷತೆಗಳನ್ನು ವಿವರಿಸಿದರು. ವಿಕಸಿತ ಭಾರತ ನಿರ್ಮಾಣಕ್ಕೆ ಎಲ್ಲರ ಪರಿಶ್ರಮ, ಕೊಡುಗೆ ಅವಶ್ಯ ಎಂದರು.

ಡಾ.ಎಂ.ಎಂ. ಜೋಶಿ,ಶ್ರೀಮತಿ ಪ್ರಮೀಳಾ ಜೋಶಿ, ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾನೂನು ಸಚಿವ ಎಚ್.ಕೆ ಪಾಟೀಲ, ವಿದಾನ ಪರಿಷತ್ ಸಭಾಪತಿ ಬಸವರಸಜ ಹೊರಟ್ಟಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್ ಪಾಟೀಲ, ಶ್ರೀನಿವಾಸ ಮಾನೆ ವೇದಿಕೆಯಲ್ಲಿದ್ದರು.