ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದ ಸರ್ಕಾರ
ಬೆಂಗಳೂರು: ಡಿಜಿಟಲ್ ಕ್ರಾಂತಿಗೆ ಮೋದಿ ಸರ್ಕಾರ ಮುನ್ನುಡಿ ಬರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಭಾರತದ ಗ್ರಾಮೀಣ ಪ್ರದೇಶದಲ್ಲಿ 15 ರಿಂದ 25 ವರ್ಷದ ಒಳಗಿನ ಯುವ ಜನತೆ ಪೈಕಿ ಶೇಕಡ 82.1 ಮಂದಿ ಇಂಟರ್ನೆಟ್ ಬಳಸುತ್ತಿದ್ದಾರೆ ಹಾಗೂ ನಗರ ಪ್ರದೇಶದಲ್ಲಿ ಶೇ 91.8 ಮಂದಿ ಬಳಕೆ ಮಾಡುತ್ತಿರುವ ಕುರಿತು ಕಾಂಪ್ರಿಹೆನ್ಸಿವ್ ಆನ್ಯುವಲ್ ಮಾಡ್ಯುಲರ್ ಸರ್ವೇಯಲ್ಲಿ ಬಹಿರಂಗವಾಗಿರುವುದು ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದಿರುವ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಸರ್ಕಾರದ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿ. ಸರಾಸರಿ ಡೇಟಾ ದರ (ಇಂಟರ್‌ನೆಟ್ ದರ)ವು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜಿ.ಬಿ ಗೆ 269 ರೂಗಳಿದ್ದವು, ಮೋದಿ ಸರ್ಕಾರದ ಅವಧಿಯಲ್ಲಿ ಜಿ.ಬಿ ಗೆ 16 ರೂಗಳಿಂದ 22ರೂ ಗಳಿದ್ದು, ಹೆಚ್ಚು ವ್ಯಾಪಾರ ಸ್ನೇಹಿ ಮತ್ತು ಸುಲಭ ವ್ಯವಹಾರದ ಜೊತೆಗೆ ಉದ್ಯೋಗ ಸೃಷ್ಠಿ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಆದಾಯ ವೃದ್ಧಿಯೊಂದಿಗೆ ದೇಶದ ಜಿಡಿಪಿ ಹೆಚ್ಚಲಿದೆ. ಕೊವಿಡ್ ನಂತರದ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಆನ್ ಲೈನ್ ಆಗಿರುವುದರಿಂದ ವಿಧ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದಿದ್ದಾರೆ.