ಡಿನ್ನರ್ ಪಾರ್ಟಿಗೆ ಮಹತ್ವ ಕೊಡಬೇಕಿಲ್ಲ
08:01 PM Jan 12, 2025 IST
|
Samyukta Karnataka
ಬೆಳಗಾವಿ: ಸಚಿವರು ತಮ್ಮ ಮನೆಗಳಲ್ಲಿ ಡಿನ್ನರ್ ಆಯೋಜನೆ ಮಾಡಿರುವುದಕ್ಕೆ ಮಹತ್ವ ಕೊಡಬೇಕಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಗೆ ಊಟಕ್ಕೆ ಹೋಗಿದ್ದಾರೆ. ನನ್ನ ಮನೆಗೂ ಮುಖ್ಯಮಂತ್ರಿಗಳು ಊಟಕ್ಕೆ ಬಂದಿದ್ದಾರೆ. ವಿರೋಧ ಪಕ್ಷದವರು ಊಟಕ್ಕೆ ಬರುತ್ತಾರೆ. ನಾವು ಹೋಗುತ್ತೇವೆ. ಅದರಲ್ಲಿ ತಪ್ಪೇನಿದೆ? ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.
ಬಿಜೆಪಿ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿಗೆ ಬೆದರಿಕೆ ಪತ್ರದ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ.ರವಿ ಬೆದರಿಕೆಯ ಪತ್ರವನ್ನು ತಾವೇ ಬರೆದು ಕಥೆ ಕಟ್ಟುತ್ತಿದ್ದಾರೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.
Next Article