ಡಿ. ೨೬ ಕ್ಕೆ ಯುವ ನಿಧಿ ಕಾರ್ಯಕ್ರಮದ ನೋಂದಣಿಗೆ ಚಾಲನೆ
12:57 PM Dec 18, 2023 IST
|
Samyukta Karnataka
ಕಲಬುರಗಿ: ಹೊಸ ವರ್ಷದ ಜನೆವರಿ ತಿಂಗಳ ಎರಡನೇ ವಾರದಲ್ಲಿ ಐದನೇ ಗ್ಯಾರಂಟಿ ಯುವ ನಿಧಿ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು. ಶರಣಬಸವ ವಿಶ್ವವಿದ್ಯಾಲಯ ಐದನೇ ಘಟಿಕೋತ್ಸವ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಯುವ ನಿಧಿಗೆ ಎಲ್ಲ ತಯಾರಿ ನಡೆದಿದ್ದು, ಇದೇ ಡಿಸೆಂಬರ್ ೨೬ ರಂದು ನೋಂದಣಿಗೆ ಚಾಲನೆ ಸಿಗಲಿದೆ. ಎಲ್ಲ ಪದವೀಧರರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಒಂದು ವರ್ಷಕ್ಕೆ ೧೫೦೦ ಸಾವಿರ ಕೋಟಿ ಯುವ ನಿಧಿಗೆ ಅನುದಾನದ ಅವಶ್ಯಕತೆ ಇದೆ. ಇದಕ್ಕಾಗಿ ಹಣದ ಕೊರತೆ ಏನಿಲ್ಲ ಎಂದು ಸ್ಪಷ್ಟಪಡಿಸಿದರು.
Next Article