ತಮಸೋಮಾ ಜ್ಯೋತಿರ್ಗಮಯ
ಅಜ್ಞಾನವೇ ತಮಸ್ಸು. ಜ್ಯೋತಿ ಎಂದರೆ ಜ್ಞಾನ ಕತ್ತಲೆಯಿಂದ ಬೆಳಕಿಗೆ ಕರೆದುಕೊಂಡು ಹೋಗುವುದು ಎಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುವುದು ಅಂತ ಅರ್ಥ.
ಅಜ್ಞಾನವೆಂಬ ಮೃತ್ಯು, ಅಸತ್ ಪ್ರವೃತ್ತಿಯು ದುಃಖವು. ಹಾಗೂ ಮೃತ್ಯು ಎನ್ನಲಾಗುತ್ತದೆ.
ಆ ಒಂದು ಅಸತ್ತಿನಿಂದ, ಸತ್‌ವರೆಗೆ ಕರೆದುಕೊಂಡು ಹೋಗುವುದು ಅಮೃತತ್ವ. ಸಂಸಾರವನ್ನು ಕಳೆಯುವ ಜ್ಞಾನವು ಅಮೃತ. ಅಧ್ಯಯನವನ್ನು ಅತ್ಯಂತ ಭಕ್ತಿಶ್ರದ್ಧೆಯಿಂದ ಮಾಡುವವರಿಗೆ ಆ ಶಾಸ್ತ್ರಗಳ ಭಾವದ ಬೋಧ ಚೆನ್ನಾಗಿ ಆದಾಗ ಆಗುವಂತಹ ಆನಂದ ಎಷ್ಟು ಅದ್ಭುತ. ಅಂದರೆ ಅದು ಬ್ರಹ್ಮಾನಂದ ಸರೋವರವಿದ್ದಂತೆ. ಅಷ್ಟು ಅಪರಿಮಿತವಾದ ಸಂತಸ ನಮ್ಮದಾಗುತ್ತದೆ. ಜ್ಞಾನಕ್ಕೆ ಅಂಥ ಶಕ್ತಿ ಇದೆ.
ಅಂತಹ ಆನಂದವನ್ನು ಅನುಭವಿಸುವ, ರಘೋತ್ತಮತೀರ್ಥ ಶ್ರೀಪಾದಂಗಳ ಮಹಾಜ್ಞಾನಿಗಳು, ಭಗವಂತನ ಮಹಿಮೆಯನ್ನು ತಿಳಿಸುವ ಶಾಸ್ತ್ರಗಳಲ್ಲಿ ಆ ಜ್ಞಾನ ಆನಂದವನ್ನು ನೀಡುತ್ತದೆ ಎನ್ನುವುದಕ್ಕೆ ಅದು ಅಮೃತ, ಮುಂದೆ ಅಪರೋಕ್ಷ ಜ್ಞಾನವಾಗಿ ಮೋಕ್ಷದ ಅಪರೋಕ್ಷ ಆನಂದವನ್ನು ಪಡೆಯುವುದಕ್ಕೆ ಈ ಶಾಸ್ತ್ರದ ಜ್ಞಾನ ಸಾಧನವಾಗುತ್ತದೆ ಹೀಗಾಗಿ ಈ ಜ್ಞಾನವು ಅಮೃತ.
ನಮಗೆ ಅಪರೋಕ್ಷ ಜ್ಞಾನ ಆಗುವುದಕ್ಕೆ ಹೇಗೆ ನಾವು ಇರಬೇಕು ಆ ರೀತಿ ನಮಗೆ ಪ್ರಚೋದನೆ/ಪ್ರೇರಣೆಯನ್ನು ಮಾಡು, ನಿಷ್ಕಾಮದಿಂದ ನಾವು ಭಗವಂತನ ಸೇವೆಯನ್ನು ಮಾಡುವಂತೆ ಪ್ರೇರಣೆ ಮಾಡಿಸಿರಿ ಎಂದು ನಾವು ವಾಯು ದೇವರನ್ನು ಕೇಳಿಕೊಳ್ಳಬೇಕು, ಆಗ ವಾಯುದೇವರು ಅದನ್ನೇ ಭಗವಂತನಿಗೆ ಕೇಳಿಕೊಳ್ಳುತ್ತಾರೆ. ಆಗ ನಮಗೆ ಜ್ಞಾನಜ್ಯೋತಿ ಇದು ಬರುವುದಕ್ಕೆ ಸಾಧ್ಯ. ತಮಸೋಮಾ ಜ್ಯೋತಿರ್ಗಮಯ.
ಈಗಷ್ಟೇ ತಿಳಿದ ಹಾಗೆ ಆ ಜ್ಞಾನ ಸಿಗಬೇಕಾದರೆ ಏನೆಲ್ಲ ಬೇಕು ಅದನ್ನು ನಮ್ಮಿಂದ ಮಾಡಿಸು ಶಾಸ್ತ್ರಗಳ ಅಧ್ಯಯನ ಮಾಡಬೇಕು.
ಶಾಸ್ತ್ರಗಳ ಅಧ್ಯಯನ ಮಾಡಿ ಜ್ಞಾನವನ್ನು ಪಡೆಯಬೇಕಾದರೆ ಸತ್ಕರ್ಮಗಳನ್ನು ಮಾಡಿಸಿ ಮಹಾತ್ಮರ ಸೇವೆಯನ್ನು ಮಾಡಿಸಿ ಆ ಪುಣ್ಯವನ್ನು ನೀಡಿ ದೊಡ್ಡ ಜ್ಞಾನಿಗಳ ಸಜ್ಜನರ ಸಂಘ ಸಮಾಗವನ್ನು ಆಗುವಂತೆ ಮಾಡಿ, ಉತ್ತಮರ ಸಂಗವನ್ನು ಎನಗಿತ್ತು ಸಲಹು ಎಂಬುದಾಗಿ ಶ್ರೀ ಪಾದರಾಜರು ತಿಳಿಸಿದಂತೆ ಸಾಧು ಸಜ್ಜನರ ಸಂಗವನ್ನು ದೇವರು ನಮಗೆ ಕೊಟ್ಟು ಜ್ಞಾನವನ್ನು ಕೊಡಬೇಕು. ಎಷ್ಟು ನಮ್ಮಲ್ಲಿ ಪಾಪಗಳಿರುತ್ತೋ ಅಷ್ಟು ಜ್ಞಾನಕ್ಕೆ ವಿಘ್ನವಾಗುತ್ತದೆ.