For the best experience, open
https://m.samyuktakarnataka.in
on your mobile browser.

ತವರುಮನೆ ಸೇರಿದ ಪತ್ನಿ ಕುತ್ತಿಗೆ ಕೊಯ್ದುಕೊಂಡ ಪತಿ

10:55 PM Jun 18, 2024 IST | Samyukta Karnataka
ತವರುಮನೆ ಸೇರಿದ ಪತ್ನಿ ಕುತ್ತಿಗೆ ಕೊಯ್ದುಕೊಂಡ ಪತಿ

ಇಳಕಲ್: ಗಂಡ ಕುಡಿದು ಬಂದು ಹೊಡೆಯುತ್ತಾನೆ ಎಂದು ಹೆಂಡತಿ ತವರುಮನೆಗೆ ಹೋದರೆ ಗಂಡ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಪೊಲೀಸ್ ಠಾಣೆಗೆ ಬಂದ ಪ್ರಸಂಗ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ನಗರದ ಬಾಷಾ ಎಂಬ ಯುವಕ ಬಕ್ರೀದ್ ಹಬ್ಬದ ಆಚರಣೆಯ ದಿನವಾದ ಸೋಮವಾರ ರಾತ್ರಿ ಸಮಯದಲ್ಲಿ ಕುತ್ತಿಗೆ ಕೊಯ್ದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾನೆ. ಅಲ್ಲಿ ಪೊಲೀಸರು ಮೊದಲು ಆಸ್ಪತ್ರೆಗೆ ಹೋಗೋಣ ಎಂದು ಹೇಳಿದರೆ ಅವರ ಕೈಗೆ ಸಿಗದೇ ಪೊಲೀಸ್ ಠಾಣೆ ಮತ್ತು ಬಸ್ ನಿಲ್ದಾಣದ ರಸ್ತೆಯ ತುಂಬಾ ಓಡಾಡಿದ್ದಾನೆ. ಆತನನ್ನು ಹಿಡಿದು ಆಟೋದಲ್ಲಿ ಆಸ್ಪತ್ರೆಗೆ ಹೋಗೋಣ ಎಂದು ಕರೆದರೆ `ಆಟೋ ಚಾರ್ಜ್ ನಾನೇ ಕೊಡುತ್ತೇನೆ, ಆಸ್ಪತ್ರೆಯ ಬಿಲ್ ನಾನೇ ಕೊಡುತ್ತೇನೆ, ಆದರೆ ನನ್ನ ಹೆಂಡತಿ ಬರಬೇಕು. ಅವಳು ಬಂದ ನಂತರವೇ ಗಾಯಕ್ಕೆ ಹೊಲಿಗೆ ಹಾಕಿಸಿಕೊಳ್ಳುವದು' ಎಂದು ಹಠ ಹಿಡಿದಿದ್ದಾನೆ. ಆಯ್ತು ಮೊದಲು ಆಸ್ಪತ್ರೆಗೆ ನಡಿ ಎಂದು ಪೊಲೀಸರು ಹರಸಾಹಸಪಟ್ಟು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಅವನ ಪತ್ನಿಯ ಮನೆಗೆ ಕರೆ ಮಾಡಿದಾಗ, ಆತ ಕುಡಿಯುವದನ್ನು ಬಿಟ್ಟರೆ ಮಗಳನ್ನು ಕಳಿಸಿ ಕೊಡುತ್ತೇವೆ ಎಂಬ ಉತ್ತರ ಬಂದಿದೆ ಎಂದು ತಿಳಿದುಬಂದಿದೆ.