ಅಪಘಾತ: ಇಬ್ಬರು ಸಾವು, ನಾಲ್ವರಿಗೆ ಗಾಯ
03:25 PM Dec 29, 2023 IST | Samyukta Karnataka
ಬೈಲಹೊಂಗಲ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ಸಮೀಪದ ಇಂಚಲ ಗ್ರಾಮದ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.
ಮೃತಪಟ್ಟವರನ್ನು ಬೈಲಹೊಂಗಲದ ಪಟ್ಟಣದ ಲದ್ದಿಗಟ್ಟಿ ನಿವಾಸಿ ಮಂಗಲಾ ಮಹಾಂತೇಶ ಭರಮನಾಯ್ಕರ(೫೦), ಚಾಲಕ ಸಂಪಗಾಂವ ಗ್ರಾಮದ ಶ್ರೀಶೈಲ ಸಿದ್ದನಗೌಡ ನಾಗನಗೌಡರ(೪೦) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡವರನ್ನು ರಾಯನಾಯ್ಕ ಭರಮನಾಯ್ಕರ(೮೭), ಗಂಗವ್ವ ರಾಯನಾಯ್ಕ ಭರಮನಾಯ್ಕರ(೮೦), ಮಂಜುಳಾ ಶ್ರೀಶೈಲ ನಾಗನಗೌಡರ(೩೦), ಇಂಚಲ ಗ್ರಾಮದ ಚಾಲಕ ಸುಭಾನಿ ಲಾಲಸಾಬ ವಕ್ಕುಂದ(೨೮) ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.