ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆಂತರಿಕ ಅಸಮಾಧಾನದ ಕಾರಣಕ್ಕೆ ಸರ್ಕಾರ ಬಲಿ

11:36 AM May 24, 2024 IST | Samyukta Karnataka

ಬಳ್ಳಾರಿ: ಜನರ ಇಚ್ಛೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ 5 ವರ್ಷ ಪೂರೈಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 2023ನಲ್ಲಿ ನಡೆದ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ನಾನು ಓರ್ವ ಕೇಂದ್ರ ಸಚಿವನಾಗಿ ಈ ಸರ್ಕಾರ ಐದು ವರ್ಷ ಪೂರೈಸಬೇಕು. ತುಘಲಕ್ ದರ್ಬಾರ್ ಆಗಬಾರದು. ಆದರೆ, ಆಂತರಿಕ ಅಸಮಾಧಾನದ ಕಾರಣಕ್ಕೆ ಸರ್ಕಾರ ಬಲಿ ಆದರೆ ಏನು ಮಾಡಲಾಗದು ಎಂದರು.
ಸರ್ಕಾರ ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯ. ವರ್ಷ ಆದರೂ ಒಂದೇ ಒಂದು ಕಿಮೀ ರಸ್ತೆಗಳಿಲ್ಲ, ಆಸ್ಪತ್ರೆಗಳಿಗೆ ಔಷಧ ಇಲ್ಲ, ಮೂರು ತಿಂಗಳಾದರೂ ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದರು. ತುಷ್ಟೀಕರಣ ನೆಪದಲ್ಲಿ ರಾಮೇಶ್ವರ ಬಾಂಬ್ ಸ್ಫೋಟವನ್ನು ಸಿಲಿಂಡರ್ ಸ್ಫೋಟ ಅಂದ್ರು. ಬಯಲಾದ ಮೇಲೆ ಮಾಮೂಲು ಹೇಳಿಕೆ ನೀಡಿದರು ಎಂದು ಅವರು ಕಿಡಿಕಾರಿದರು. ಇಂಥ ವಿಷಯಗಳ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕೇಸ್ ಹಾಕಿ ಬೆದರಿಕೆ ಒಡ್ಡಲಾಗುತ್ತಿದೆ ಎಂದರು. ಸರ್ಕಾರ ದಿವಾಳಿ ಆಗಿದೆ. ಭ್ರಷ್ಟಾಚಾರ ತಾಂಡವ ಆಡುತ್ತಿದೆ. ದೇಶದ ಅನೇಕ ಭಾಗಗಳಲ್ಲಿ ನಡೆಯುತ್ತಿರುವ ಚುನಾವಣೆಗಳಿಗೆ ಕಾಂಗ್ರೆಸ್ ಸರ್ಕಾರ ಎಟಿಎಂ ಆಗಿದೆ ಎಂದರು ಅವರು ತಿಳಿಸಿದರು.

Next Article