ಈ ಮತಗಟ್ಟೆಯಲ್ಲಿ ಬಲಗೈಗೆ ಶಾಹಿ
08:43 AM May 07, 2024 IST
|
Samyukta Karnataka
ಬಾಗಲಕೋಟೆ: ಬಾಗಲಕೋಟೆ ನಗರದ ಹಳೆ ತಾಪಂ ಕಚೇರಿ ಮತಗಟ್ಟೆಯಲ್ಲಿ ಸಿಬ್ಬಂದಿ ಮತದಾರರ ಬಲಗೈಗೆ ಶಾಹಿ ಹಾಕಿ ಎಡವಟ್ಟು ಮಾಡುತ್ತಿದ್ದಾರೆ.
ಚುನಾವಣಾ ಆಯೋಗ ಎಡಗೈಗೆ ಶಾಹಿ ಹಾಕುವಂತೆ ಸೂಚಿಸಿದೆ ಆದರೆ ಈ ಮತಗಟ್ಟೆಯಲ್ಲಿ ಮಾತ್ರ ಬಲಗೈಗೆ ಶಾಹಿ ಹಾಕುವುದು ಮುಂದವರಿದಿದೆ.
ಮತಗಟ್ಟೆ ಸಿಬ್ಬಂದಿ ಚುನಾವಣಾ ಗಂಭೀರತೆ ಅರಿಯದೆ ಕಾರ್ಯನಿವಹಿಸುತ್ತಿದ್ದು, ಸಿಬ್ಬಂದಿ ನಡುವೆ ಸಮನ್ವಯತೆ ಕೊರತೆಯೂ ಕಂಡು ಬಂದಿದೆ. ಮತದಾನ ಆರಂಭಗೊಂಡಾಗಲೂ ಮತಗಟ್ಟೆಯಲ್ಲಿ ಕಾಂಗ್ರೆಸ್ ಏಜೆಂಟ್ ಮೊಬೈಲ್ ಬಳಸುತ್ತಿದ್ದರು, ಅವರು ಅಲ್ಲಿ ಕುಳಿತು ಅರ್ಧ ಗಂಟೆ ಕಳೆದಿದ್ದರೂ ಮತಗಟ್ಟೆ ಅಧಿಕಾರಿ ಅವರಿಂದ ಏಜೆಂಟ್ ಚೀಟಿಯನ್ನೂ ಪಡೆದಿರಲಿಲ್ಲ. ಸ್ಥಳೀಯ ವಾರ್ಡ್ ನಗರಸಭೆ ಪತಿಯೂ ಸೇರಿ ಹಲವರ ಬಲಗೈಗೆ ಶಾಹಿ ಹಾಕಲಾಗಿದೆ
Next Article