ಸ್ವಾಮೀಜಿಗಳು ಎರಡನೇ ದೇವರು ಅಂತ ನಮ್ಮ ಭಾವನೆ
ತುಮಕೂರು: ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿ ಹೇಳಿಕೆ ಶೋಭೆ ತರುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಕೆಂಪೇಗೌಡ ಜಂಯತಿ ವೇಳೆ ಸಿಎಂ ಸಿದ್ದ ರಾಮಯ್ಯಗೆ ಸ್ವಾಮೀಜಿ ಮುಜುಗರ ತಂದರಾ ಎಂಬ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಅವರನ್ನು ವೇದಿಕೆ ಮೇಲೆ ಕೂರಿಸಿಕೊಂಡು, ಒಂದು ಧಾರ್ಮಿಕ ಸಭೆನಲ್ಲಿ ಈ ರೀತಿಯಲ್ಲಿ ಮಾತನಾಡುವುದು ಯಾರಿಗಾದರೂ ಶೋಭೆ ತರುತ್ತದಾ. ನಾಡಪ್ರಭು ಕೆಂಪೇಗೌಡ ಜಯಂತಿ ಎಲ್ಲರೂ ಆಸಕ್ತಿಯಿಂದ, ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುವಂತಹ ದಿನಾಚರಣೆ ಅಂತ ನಾನು ಅನ್ಕೊಂಡಿದಿನಿ. ಅಂತಹ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಸ್ವಾಮೀಜಿಗಳು ರಾಜಕೀಯದಲ್ಲಿ ಮೂಗು ತೂರಿಸಬಾರದು ನಾವು ನೋಡಿರುವ ಸ್ವಾಮೀಜಿಗಳೆಲ್ಲ ಯಾರು ಅಂದರೆ ಸಮಾಜಕ್ಕೆ ಒಳಿತು ಮಾಡುವಂತವರು. ಸಮಾಜ ಅಂದರೆ ಒಂದು ಜಾತಿಗಲ್ಲ, ಮಾನವ ಕುಲಕ್ಕೆ ಒಳಿತನ್ನು ಮಾಡುವಂತವರು. ಆದರೆ, ಲೇಟೆಸ್ಟ್, ಹೈಟೆಕ್ ಸ್ವಾಮೀಜಿಗಳು ಬಹಳ ಜನ ಬಂದಿದ್ದಾರೆ. ಅವರ ಥಿಂಕಿಂಗ್ ಒಂದೊಂದು ರೀತಿ ಇರುತ್ತೆ. ಅದಕ್ಕೆ ನಾವೇನು ಹೇಳಲು ಆಗಲ್ಲ, ಅದು ಅವರಿಗೆ ಸೇರಿರುವಂತಹದ್ದು. ಅವರ ನಡವಳಿಕೆಗಳು ಅವರು ಮಾತನಾಡುವಂತಹದ್ದು ಅವರಿಗೆ ಸೇರಿದ್ದು. ಇದು ಬ್ಲಾಕ್ ಮೈಲ್ ಅಂತ ನಾನು ಹೇಳುತ್ತಿಲ್ಲ. ನಾವು ಸ್ವಾಮೀಜಿಗಳು ಅಂದರೆ ದೇವರ ಅಪರವತಾರ ಅಂತ ಹೇಳಿ ಕಾಲಿಗೆ ಬಿಳ್ಳುತ್ತೇವೆ . ನಮಸ್ಕಾರ ಮಾಡಿ ಆಶೀರ್ವಾದ ಪಡೆಯಬೇಕು ಎನ್ನುವ ನಡವಳಿಕೆಯನ್ನು ನಾವು ನಡೆದುಕೊಂಡು ಬಂದಿದ್ದೇವೆ. ಸ್ವಾಮೀಜಿಗಳು ಎರಡನೇ ದೇವರು ಅಂತಾನೆ ನಮ್ಮ ಭಾವನೆ. ಅವರು ಒಬ್ಬ ಮನುಷ್ಯನ ಮಟ್ಟಕ್ಕೆ ಇಳಿದರೆ ಯಾರು ಬೇಡ ಅನ್ನೋಕೆ ಆಗುತ್ತಾ ಅದು ಅವರಿಗೆ ಸೇರಿರುವಂತಹದ್ದು ಎಂದರು.