For the best experience, open
https://m.samyuktakarnataka.in
on your mobile browser.

ಎಸೆಸೆಲ್ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

04:03 PM Dec 01, 2023 IST | Samyukta Karnataka
ಎಸೆಸೆಲ್ಸಿ  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಮುಂಬರುವ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- 1 ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟ ಮಾಡಿದೆ. ಈ ವೇಳಾಪಟ್ಟಿ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 15ರ ಒಳಗೆ ಅವಕಾಶ ನೀಡಲಾಗಿದೆ. 2023ರ ಮಾರ್ಚ್ 2 ರಿಂದ ಮಾರ್ಚ್ 22ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಇನ್ನು 2024ರ ಮಾರ್ಚ್ 25ರಿಂದ ಏಪ್ರಿಲ್ 4ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿದೆ.
ಎಸ್‍ಎಸ್‍ಎಲ್‍ಸಿ ವೇಳಾಪಟ್ಟಿ : ಮಾರ್ಚ್ 25- ಪ್ರಥಮ ಭಾಷೆ (ಕನ್ನಡ), ಮಾರ್ಚ್ 27- ಸಮಾಜ ವಿಜ್ಞಾನ, ಮಾರ್ಚ್ 30- ವಿಜ್ಞಾನ, ಏಪ್ರಿಲ್ 2- ಗಣಿತ, ಏಪ್ರಿಲ್ 4- ತೃತೀಯ ಭಾಷೆ (ಹಿಂದಿ), ಏಪ್ರಿಲ್ 6- ದ್ವೀತಿಯ ಭಾಷೆ (ಇಂಗ್ಲಿಷ್)
ದ್ವಿತೀಯ ಪಿಯುಸಿ ವೇಳಾಪಟ್ಟಿ : ಮಾರ್ಚ್ 2- ಕನ್ನಡ, ಅರೇಬಿಕ್, ಮಾರ್ಚ್ 4- ಇತಿಹಾಸ, ಭೌತಶಾಸ್ತ್ರ , ಮಾರ್ಚ್ 5- ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್ ಕೇರ್, ಮಾರ್ಚ್ 6- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಮಾರ್ಚ್ 7- ಹಿಂದಿ, ಮಾರ್ಚ್ 9- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾರ್ಚ್ 11- ಇಂಗ್ಲಿಷ್,ಮಾರ್ಚ್ 12- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾರ್ಚ್ 13- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾರ್ಚ್ 14- ಗಣಿತ, ಶಿಕ್ಷಣಶಾಸ್ತ್ರ, ಮಾರ್ಚ್ 16- ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 18- ರಸಾಯನಶಾಸ್ತ್ರ, ಮನಃಶಾಸ್ತ್ರ,ಮೂಲಗಣಿತ, ಹಿಂದೂಸ್ಥಾನಿ ಸಂಗೀತ, ಮಾರ್ಚ್ 20- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ,ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಮಾರ್ಚ್ 22- ಅರ್ಥಶಾಸ್ತ್ರ.