For the best experience, open
https://m.samyuktakarnataka.in
on your mobile browser.

ಒಂದು ನಿಲ್ದಾಣ-ಒಂದು ಉತ್ಪನ್ನ: "ಇಳಕಲ್ ಸೀರೆ" ವ್ಯಾಪಾರಕ್ಕೆ ಚಾಲನೆ

02:13 PM Mar 12, 2024 IST | Samyukta Karnataka
ಒಂದು ನಿಲ್ದಾಣ ಒಂದು ಉತ್ಪನ್ನ   ಇಳಕಲ್ ಸೀರೆ  ವ್ಯಾಪಾರಕ್ಕೆ ಚಾಲನೆ

ಬೆಂಗಳೂರು: ಒಂದು ನಿಲ್ದಾಣ-ಒಂದು ಉತ್ಪನ್ನದಡಿ ನಮ್ಮ ರಾಜ್ಯದ ಶ್ರೀಮಂತ ಪರಂಪರೆಯಾದ "ಇಳಕಲ್ ಸೀರೆ" ವ್ಯಾಪಾರಕ್ಕೆ ಚಾಲನೆ ನೀಡಲಾಯಿತು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರು "ಒಂದು ನಿಲ್ದಾಣ-ಒಂದು ಉತ್ಪನ್ನ" ಯೋಜನೆಗೆ ದೇಶದಾದ್ಯಂತ ಇಂದು Virtual ಮೂಲಕ ಗುಜರಾತ್ ರಾಜಧಾನಿ ಅಹಮದಾಬಾದ್ ನಿಂದ ಚಾಲನೆ ನೀಡಿದ ವಿಶೇಷ ಕಾರ್ಯಕ್ರಮದಲ್ಲಿ ಶಿವಮೊಗ್ಗದ ರೈಲ್ವೇ ನಿಲ್ದಾಣದಲ್ಲಿ ಉಪಸ್ಥಿತರಿದ್ದು ಸಮಾರಂಭ ಉದ್ಘಾಟಿಸಿ, ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದ ನಮ್ಮ ರಾಜ್ಯದ ಶ್ರೀಮಂತ ಪರಂಪರೆಯಾದ "ಇಳಕಲ್ ಸೀರೆ" ವ್ಯಾಪಾರಕ್ಕೆ ಚಾಲನೆ ಕೊಡಲಾಯಿತು.
ಈ ಯೋಜನೆಯ ಪ್ರಮುಖ ಉದ್ದೇಶ ದೇಶೀಯ ಉತ್ಪನ್ನಗಳಿಗೆ, ಸ್ಥಳೀಯ ಉತ್ಪನ್ನಗಳಿಗೆ, ಕರಕುಶಲ ವಸ್ತುಗಳಿಗೆ, ಕೈಮಗ್ಗದ ಉತ್ಪನ್ನಗಳಿಗೆ, ಸಂಸ್ಕರಿಸಿದ/ಅರೆಸಂಸ್ಕರಿಸಿದ ಆಹಾರಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅಳಿವಿನ ಅಂಚಿನಲ್ಲಿರುವ ಈ ವರ್ಗಗಳಿಗೆ ಹೆಚ್ಚುವರಿ ಆದಾಯದ ಅವಕಾಶ ಸೃಷ್ಟಿಸಿ ಕೊಡುವುದರ ಜೊತೆಗೆ ಭಾರತದ ಶ್ರೀಮಂತ ಪರಂಪರೆಯನ್ನು ಪರಿಚಯಿಸಲು ಹಾಗೂ ಜಾಗತಿಕ ಮಟ್ಟದ ಸ್ಥಾನಮಾನ ನೀಡಲು ಈ ಐತಿಹಾಸಿಕ ಯೋಜನೆ ಜಾರಿಗೆ ತರಲಾಗಿದೆ ಎಂದಿದ್ದಾರೆ