For the best experience, open
https://m.samyuktakarnataka.in
on your mobile browser.

ಕಾಲುವೆಗೆ ಬಿದ್ದು  ಯುವಕರು ಮೃತ್ಯು

09:08 PM May 01, 2024 IST | Samyukta Karnataka
ಕಾಲುವೆಗೆ ಬಿದ್ದು  ಯುವಕರು ಮೃತ್ಯು

ಲಿಂಗಸೂಗೂರು:  ಕಾಲುವೆಯಲ್ಲಿ ಬಟ್ಟೆ ತೊಳೆಯುವಾಗ ಇಬ್ಬರು ಯುವಕರು ಕಾಲು ಜಾರಿಬಿದ್ದು ಮೃತಪಟ್ಟ ಘಟನೆ  ನಡೆದಿದೆ.ಗ್ರಾಮದ ಜಾತ್ರೆ ನಿಮಿತ್ತ ಯುವಕರು ಪಾಲಕರೊಂದಿಗೆ ಬಟ್ಟೆ ತೊಳೆಯಲು ಬಲದಂಡೆ ನಾಲೆಗೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.  ಗ್ರಾಮಸ್ಥರು ಮೃತ ದೇಹಗಳನ್ನು ಹೊರತೆಗೆದಿದ್ದು. ಮೃತರನನು ಲಕ್ಕಣ್ಣ ವಿರುಪಾಕ್ಷಪ್ಪ ಕಮರಿ, ಬಸವಂತ ಶರಣಪ್ಪ ಉಪ್ಪಾರ ಎಂದು ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ.