ಕೋಟ್ಯಂತರ ಹೃದ್ರೋಗಿಗಳಿಗೆ ನೆರವಾಗಿದ್ದ ಮೋದಿ ಸರ್ಕಾರ
ಬೆಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ, ಔಷಧಗಳು ಒದಗಿಸುವ ನಿಟ್ಟಿನಲ್ಲಿ ಈಗ ಕೇಂದ್ರ ಸರಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಮಾಜಿ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಸಕಾಲ ಕಾಯಿಲೆ, ರಕ್ತದೊತ್ತಡ, ಹೃದ್ರೋಗ, ಅಲರ್ಜಿ, ಮೈಕೈ ನೋವು, ಸೋಂಕು, ಮಲ್ಟಿವಿಟಮಿನ್, ಆಂಟಿಬಯಾಟಿಕ್ ಸೇರಿದಂತೆ 41 ಅತ್ಯಗತ್ಯ ಔಷಧಗಳ ದರ ಇಳಿಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಈ ಹಿಂದೆ ₹72 ಲಕ್ಷ ಮೌಲ್ಯದ ಕ್ಯಾನ್ಸರ್ ಔಷಧಿಯ ಬೆಲೆಯನ್ನು ಕೇವಲ ₹3 ಲಕ್ಷಕ್ಕೆ ಇಳಿಸುವ ಮೂಲಕ 2.5 ಲಕ್ಷ ಕ್ಯಾನ್ಸರ್ ಪೀಡಿತರಿಗೆ, ಹೃದ್ರೋಗಿಗಳಿಗೆ ಸಂಜೀವಿನಿಯಾದ ಕೊರೋನರಿ ಸ್ಟಂಟ್ ಗಳನ್ನು ಔಷಧಿಗಳ ರಾಷ್ಟ್ರೀಯ ಪಟ್ಟಿಗೆ ಸೇರಿಸುವ ಸೇರಿಸುವ ಮೂಲಕ ಕೋಟ್ಯಂತರ ಹೃದ್ರೋಗಿಗಳಿಗೆ ನೆರವಾಗಿದ್ದ ಮೋದಿ ಸರ್ಕಾರ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ, ಔಷಧಗಳು ಒದಗಿಸುವ ನಿಟ್ಟಿನಲ್ಲಿ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.